Sunday, June 14, 2026
spot_imgspot_img
spot_imgspot_img

ಪೇಸ್ಬುಕ್ ಖಾತೆಯಲ್ಲಿ ಧರ್ಮಸ್ಥಳದ ಧಾರ್ಮಿಕ ಶ್ರಧ್ದಾಕೆಂದ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳ ಅಶ್ಲೀಲ ಪೋಸ್ಟ್ ಪ್ರಸಾರ- ಪ್ರಕರಣ ದಾಖಲು

- Advertisement -
- Advertisement -

ಸಾಮಾಜಿಕ ಜಾಲತಾಣವಾದ ಪೇಸ್ಬುಕ್ ಖಾತೆಯಲ್ಲಿ ಧರ್ಮಸ್ಥಳದ ಧಾರ್ಮಿಕ ಶ್ರಧ್ದಾಕೆಂದ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳ ಬಗ್ಗೆ ಅಶ್ಲೀಲ ಸಂದೇಶವಿರುವ ಹಾಗೂ ಆಶ್ಲೀಲವಾಗಿ ಚಿತ್ರಿಸಿರುವ ಭಾವಚಿತ್ರವನ್ನು ಪೋಸ್ಟ್ ಪ್ರಸಾರ ಮಾಡಿದ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನಿವಾಸಿ ಚೇತನ್‌ ಎನ್‌ (28) ಎಂಬವರ e ದಿನಾಂಕ: 11-07-2025 ರಂದು ಮೊಬೈಲ್ ನಲ್ಲಿ ತನ್ನ ಫೇಸ್ಬುಕ್ ಖಾತೆಯನ್ನು ಪರಿಶೀಲಿಸುತ್ತಿದ್ದಾಗ, ಡಾಕ್ಟರ್ ವರ್ಮಾ ಎಂಬ ಪೇಸ್ಬುಕ್ ಖಾತೆಯಲ್ಲಿ, ಧರ್ಮಸ್ಥಳದ ಧಾರ್ಮಿಕ ಶ್ರಧ್ದಾಕೆಂದ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳ ಬಗ್ಗೆ ಅಶ್ಲೀಲ ಸಂದೇಶವಿರುವ ಹಾಗೂ ಆಶ್ಲೀಲವಾಗಿ ಚಿತ್ರಿಸಿರುವ ಭಾವಚಿತ್ರವನ್ನು ಪೋಸ್ಟ್ ಮಾಡಿರುವುದು ಕಂಡುಬಂದಿದ್ದು, ಈ ಬಗ್ಗೆ ದೂರುದಾರರು ನೀಡಿದ ದೂರಿನ ಮೇರೆಗೆ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ : 59/2025 ಕಲಂ: 296 ಬಿಎನ್‌ ಎಸ್‌ 2023 ರಂತೆ‌ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!