Monday, September 7, 2026
spot_imgspot_img
spot_imgspot_img

ಪುತ್ತೂರು: ಅಪ್ರಾಪ್ತರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟವರ ವಿರುದ್ಧ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಪುತ್ತೂರು: ನಗರ ಪೊಲೀಸ್‌ ಠಾಣೆಯಲ್ಲಿ ಜುಲೈ 5ರಂದು ದಾಖಲಾಗಿದ್ದ ಅಪರಾಧ ಕ್ರಮಾಂಕ 54/2025 ಪ್ರಕರಣದ ಆರೋಪಿಗಳು, ಪ್ರಕರಣದ ಅಪ್ರಾಪ್ತ ಪ್ರಾಯದ ಬಾಲಕ ಹಾಗೂ ಆತನ ಜೊತೆಗಿದ್ದ ಅಪ್ರಾಪ್ತ ಪ್ರಾಯದ ಬಾಲಕಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿರುತ್ತಾರೆ.ಸದ್ರಿ ಅಪ್ರಾಪ್ತ ವಯಸ್ಕರ ವಿಡಿಯೋವನ್ನು ಮಾದ್ಯಮಗಳಲ್ಲಿ ಹರಿಯ ಬಿಡಬಾರದೆಂದು ನಿರ್ಬಂಧ ಇದ್ದರೂ ಕೂಡ ಕೆಲವು ಅಪರಿಚಿತ ವ್ಯಕ್ತಿಗಳು, ಅಪರಿಚಿತ ಮೀಡಿಯಾ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಈ ಬಗ್ಗೆ ಪ್ರಕರಣದ ಅಪ್ರಾಪ್ತ ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ನ್ಯಾಯಾಲಯದ ಅನುಮತಿ ಪಡೆದು ಜುಲೈ 28ರಂದು ದ.ಕ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 57/2025 ಕಲಂ 74 ಜೆಜೆ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!