


ಬೆಂಗಳೂರು : ಸಾಫ್ಟ್ ವೇರ್ ಇಂಜಿನಿಯರ್ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ 1.53 ಕೋಟಿ
ರೂ. ಹಣ ಪಡೆದು ವಂಚಿಸಿದ ಆರೋಪದಡಿ ವಿಜಯ್‍ರಾಜ್ ಗೌಡ ಸಹಿತ ಮೂವರ ವಿರುದ್ಧ ಕೆಂಗೇರಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

29 ವರ್ಷದ ಯುವತಿಯೊಬ್ಬಳು ನೀಡಿದ ದೂರಿನನ್ವ ಯ ಪ್ರಮುಖ ಆರೋಪಿ ವಿಜಯ್‍ರಾಜ್ ಗೌಡ ಮತ್ತು
ಆತನ ತಂದೆಬೊರೇಗೌಡ, ಆತನ ಪತ್ನಿ ಸೌಮ್ಯ ಎಂಬವರ ವಿರುದ್ಧ ಪ್ರ ಕರಣ ದಾಖಲಾಗಿದ್ದು , ಕೃತ್ಯ ನಡೆದ
ಸ್ಥ ಳದ ಆಧಾರದಲ್ಲಿ ಕೆಂಗೇರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು
ತಿಳಿಸಿದ್ದಾರೆ.
ಆರೋಪಿ ವಿವಾಹಿತನಾಗಿದ್ದರೂಸಹ ಪತ್ನಿ ಯನ್ನು ಸಹೋದರಿ ಎಂದು ಪರಿಚಯಿಸಿ ವಂಚಿಸಿದ್ದಾನೆ ಎಂದು
ಸಂತ್ರ ಸ್ತ ಯುವತಿದೂರಿನಲ್ಲಿ ಆರೋಪಿಸಿದ್ದು , ಈ ಸಂಬಂಧವೂತನಿಖೆ ಆರಂಭಿಸಿರುವುದಾಗಿಪೊಲೀಸರು
ತಿಳಿಸಿದ್ದಾರೆ.
ವೈಟ್‍ಫೀಲ್ಡ್ ವ್ಯಾ ಪ್ತಿಯಲ್ಲಿ ವಾಸವಿದ್ದ ಯುವತಿಗೆ 2024ರಮಾರ್ಚ್‍ನಲ್ಲಿ ಮ್ಯಾ ಟ್ರಿಮೋನಿಮೂಲಕ ವಿಜಯ್
ರಾಜ್ ಗೌಡನ ಪರಿಚಯವಾಗಿತ್ತು . ‘ತಾನು ಓರ್ವ ಉದ್ಯ ಮಿ 715 ಕೋಟಿರೂ. ಮೌಲ್ಯ ದ ಆಸ್ತಿಯಿದೆ. ಜಾರಿ
ನಿರ್ದೇಶನಾಲಯ(ಈ.ಡಿ.)ದಲ್ಲಿ ದಾಖಲಾಗಿದ್ದ ಪ್ರ ಕರಣವೊಂದರಲ್ಲಿ ಜಾಮೀನುದೊರೆತಿದೆ’ ಎಂದು
ಹೇಳಿಕೊಂಡಿದ್ದ . ಬಳಿಕಯುವತಿಯ ಮನೆಯವರನ್ನೂ ಭೇಟಿಯಾಗಿದ್ದ ಆರೋಪಿ, ಸೌಮ್ಯ ಎಂಬಾಕೆಯನ್ನು
ತನ್ನ ಸಹೋದರಿಹಾಗೂತಂದೆಬೊರೇಗೌಡ ನಿವೃತ್ತ ತಹಶೀಲ್ದಾರ್ ಎಂದು ಪರಿಚಯಿಸಿಕೊಂಡಿದ್ದ ಎಂದು
ದೂರಿನಲ್ಲಿ ಉಲ್ಲೇ ಖಿಸಲಾಗಿದೆ.
ಪರಿಚಯ ಗಟ್ಟಿಯಾದ ನಂತರ, ‘ತನ್ನ ಆಸ್ತಿಯ ಸಂಬಂಧ ಈ.ಡಿ.ಯಲ್ಲಿ ಪ್ರ ಕರಣ ದಾಖಲಾಗಿದೆ, ಬ್ಯಾಂ ಕ್
ಖಾತೆಗಳು ಫ್ರೀ ಜ್ ಆಗಿವೆ ಮತ್ತು ಹೈಕೋರ್ಟ್, ಸುಪ್ರೀಂ ಕೋರ್ಟ್‍ನಲ್ಲಿ ಪ್ರ ಕರಣಗಳಿವೆ’ ಎಂದು ಸುಳ್ಳು ಹೇಳಿ
ಕೆಲವು ನಕಲಿ ದಾಖಲೆಗಳು ಮತ್ತು ಕೋರ್ಟ್ ಪ್ರ ತಿಗಳನ್ನು ಯುವತಿಗೆತೋರಿಸಿದ್ದ . ಹಣದ ಅವಶ್ಯ ಕತೆ ಇದೆ
ಎಂದು ಹೇಳಿ ಆರಂಭದಲ್ಲಿ 15 ಸಾವಿರರೂ. ಪಡೆದಿದ್ದ . ನಂತರ, ಒಟ್ಟಿ ಗೆ ವ್ಯ ವಹಾರಮಾಡೋಣ ಎಂದು
ನಂಬಿಸಿಯುವತಿಯ ಹೆಸರಿನಲ್ಲಿ ಸಾಲಮಾಡಿಸಿದ್ದ ಲ್ಲದೆ, ಆಕೆಯ ಸ್ನೇ ಹಿತರ ಬಳಿಯೂಸಾಲಮಾಡಿಸಿದ್ದ .
ಮದುವೆಗೆ ಹೆಣ್ಣು ನೋಡಲು ಬರುತ್ತೇ ವೆ ಎಂದು ಸುಳ್ಳು ಹೇಳಿ ಪುನಃಯುವತಿಯ ಸ್ನೇ ಹಿತರಿಗೆ ವ್ಯ ವಹಾರ
ಮಾಡಲು ಪ್ರೇ ರೇಪಿಸಿ, ಲಕ್ಷ ಲಕ್ಷರೂಪಾಯಿಸಾಲ ಪಡೆದಿದ್ದ . ಹೀಗೆ ಹಂತ-ಹಂತವಾಗಿ, ಯುವತಿ, ಆಕೆಯ
ಸ್ನೇ ಹಿತರು ಮತ್ತು ಸಂಬಂಧಿಕರಿಂದ ಒಟ್ಟು 1.53 ಕೋಟಿರೂಪಾಯಿಹಣ ಪಡೆದಿದ್ದ ಎಂದುದೂರಿನಲ್ಲಿ
ತಿಳಿಸಲಾಗಿದೆ.
ಹಣ ವಾಪಸ್ ನೀಡುವಂತೆಯುವತಿ ಮತ್ತು ಆಕೆಯ ಸ್ನೇ ಹಿತರು ಒತ್ತಾಯಿಸಿದಾಗ ಆರಂಭದಲ್ಲಿ ಸ್ವ ಲ್ಪ ಹಣ
ಮರಳಿಸಿದ್ದ . ಆದರೆ, ಉಳಿದ ಹಣ ನೀಡಲು ಹಿಂದೇಟುಹಾಕಿದ್ದ ಲ್ಲದೆ, ಹಣ ಕೇಳಿದಯುವತಿಹಾಗೂಆಕೆಯ
ಸ್ನೇ ಹಿತರಿಗೆ ಬೆದರಿಕೆಹಾಕಲು ಶುರುಮಾಡಿದ್ದಾನೆ. ಹಣ ವಾಪಸ್ ಕೇಳಲುಹೋದಾಗ, ವಿಜಯ್‍ರಾಜ್ ಗೌಡ
ಈಗಾಗಲೇ ಮದುವೆಯಾಗಿದ್ದು , ಒಂದು ಮಗುವೂಇರುವುದುಗೊತ್ತಾಗಿದೆ. ಸಹೋದರಿ ಎಂದು
ಪರಿಚಯಿಸಿದ್ದ ವರೇ ಆರೋಪಿಯ ಪತ್ನಿ ಎಂದು ತಿಳಿದಿದೆ ಎಂದು ಸಂತ್ರ ಸ್ತ ಯುವತಿದೂರಿನಲ್ಲಿ
ಉಲ್ಲೇ ಖಿಸಿದ್ದಾರೆ.








