Saturday, June 6, 2026
spot_imgspot_img
spot_imgspot_img

ಆಟೋ ಮೊಬೈಲ್ ಶಾಪ್ ನಲ್ಲಿ ಬೆಂಕಿ ಅವಘಡ; ವಸ್ತುಗಳು ಸುಟ್ಟು ಕರಕಲು..!

- Advertisement -
- Advertisement -

ಆಟೋ ಮೊಬೈಲ್ ಶಾಪ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಬೆಂಗಳೂರು ನಗರದ ಜೆ.ಸಿ ರಸ್ತೆಯಲ್ಲಿ ನಡೆದಿದೆ.

ಸೋಮವಾರ (ಏಪ್ರಿಲ್,01) ರಾತ್ರಿ 10:30 ಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅನಾಹುತ ಸಂಭವಿಸಿದ್ದು ಅಂಗಡಿಯಲ್ಲಿದ್ದ ವಸ್ತುಗಳೆಲ್ಲಾ ಸುಟ್ಟು ಕರಕಲಾಗಿದೆ.

ಜೆ.ಸಿ ರಸ್ತೆಯ ಜರ್ನಲಿಸ್ಟ್ ಕಾಲೋನಿಯಲ್ಲಿರುವ ಶಶಿಕಲಾ ಬಿಲ್ಡಿಂಗ್ ನಲ್ಲಿದ್ದ ಆಟೋ ಮೊಬೈಲ್ ಅಂಗಡಿಯಲ್ಲಿದ್ದ ಟಯರ್, ಆಯಿಲ್‌ನಿಂದಾಗಿ ಮತ್ತಷ್ಟು ತೀವ್ರತೆ ಪಡೆದ ಬೆಂಕಿ ಅಂಗಡಿಯಲ್ಲಿದ್ದ ವಸ್ತುಗಳನ್ನು ಆಹುತಿ ಪಡೆದಿದೆ. 4 ಅಗ್ನಿಶಾಮಕ ವಾಹನಗಳನ್ನು ಬಳಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ‌ ನಂದಿಸಿದ್ದಾರೆ. ಅಂಗಡಿ ಬಂದ್‌ ಮಾಡಿ ಸಿಬ್ಬಂದಿಯೆಲ್ಲಾ ಮನೆಗೆ ತೆರಳಿದ್ದ ಕಾರಣದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

- Advertisement -

Related news

error: Content is protected !!