Monday, May 6, 2024
spot_imgspot_img
spot_imgspot_img

ನ್ಯೂಯಾರ್ಕ್‌ನ ಅಪಾರ್ಟ್ಮೆಂಟ್ ನಲ್ಲಿ ಅಗ್ನಿ ಅವಘಡ – ಭಾರತ ಮೂಲದ ಯುವಕ ಮೃತ್ಯು

- Advertisement -G L Acharya panikkar
- Advertisement -

ನ್ಯೂಯಾರ್ಕ್‌ನ ಹಾರ್ಲೆನ್‌ನಲ್ಲಿ ಬಳಿಯ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಭಾರತ ಮೂಲದ 27 ವರ್ಷದ ಫಾಜಿಲ್ ಖಾನ್ ಮೃತಪಟ್ಟಿದ್ದು , 17 ಮಂದಿ ಗಾಯಗೊಂಡಿದ್ದಾರೆ.

ಫಾಜಿಲ್ ಖಾನ್ ಅವರು ನ್ಯೂಯಾಕ್ ಮೂಲದಮಾಧ್ಯಮ ಕಂಪನಿ ‘ದಿ ಹೆಚಿಂಗರ್’ನಲ್ಲಿ ಪತ್ರ ಕರ್ತರಾಗಿ ಕೆಲಸ ಮಾಡುತ್ತಿದ್ದರು.

ಇ-ಬೈಕ್‌ನಲ್ಲಿನ ಲಿಥಿಯಂ-ಐಯಾನ್ ಬ್ಯಾಟರಿಯು ಹಾರ್ಲೆಮ್ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಬೆಂಕಿಗೆ ಕಾರಣವಾಯಿತು ಎಂದು ಸ್ಥಳೀಯ ಅಗ್ನಿಶಾಮಕ ಇಲಾಖೆಯನ್ನು ಉಲ್ಲೇಖಿಸಿ ಡೈಲಿ ನ್ಯೂಸ್ ವರದಿ ಮಾಡಿದೆ.

ನ್ಯೂಯಾರ್ಕ್ ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಅವರು ಫಾಜಿಲ್ ಖಾನ್ ನಿಧನಕ್ಕೆ ಸಂತಾಪ ವ್ಯ ಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

- Advertisement -

Related news

error: Content is protected !!