Friday, March 5, 2021

ಲಘು ವಿಮಾನ ಟೇಕ್ ಆಫ್ ವೇಳೆ ದುರಂತ- ನಾಲ್ವರು ಪುಟ್ಬಾಲ್ ಆಟಗಾರರು ಸಾವು!

ಬ್ರೆಜಿಲ್: ಲಘು ವಿಮಾನವೊಂದು ಟೇಕ್ ಆಫ್ ವೇಳೆ ನಡೆದ ದುರಂತದಲ್ಲಿ ನಾಲ್ವರು ಪುಟ್ಬಾಲ್ ಆಟಗಾರರು ಸಾವಪ್ಪಿರುವ ಘಟನೆ ಬ್ರೆಜಿಲ್ ನ ಸಾವೋಪೋಲೋದಲ್ಲಿ ನಡೆದಿದೆ.

ಬ್ರೆಜಿಲಿಯನ್ ಕಪ್ ಟೂರ್ನಿಯ ಪಂದ್ಯದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಪುಟ್ಬಾಲ್ ಆಟಗಾರರಿದ್ದ ಲಘು ವಿಮಾನ ಟೇಕ್ ಆಫ್ ಸಂದರ್ಭದಲ್ಲಿ ಅಪಘಾತಕ್ಕೀಡಾಗಿದೆ. ದುರಂತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಪಲ್ಮಾಸ್ ಕ್ಲಬ್ ಅಧ್ಯಕ್ಷ ಲೂಕಾಸ್‌ ಮೇರಾ, ಆಟಗಾರರಾದ ಲೂಕಾಸ್ ಪ್ರಕ್ಸಿಡಿಸ್‌, ಗುಲೆರ್ಮೆ ನೊಯೆ, ರಣುಲ್‌, ಮಾರ್ಕಸ್ ಮೋಲಿನರಿ ಹಾಗೂ ವಿಮಾನದ ಪೈಲೆಟ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

- Advertisement -

MOST POPULAR

HOT NEWS

Related news

error: Content is protected !!