Saturday, May 4, 2024
spot_imgspot_img
spot_imgspot_img

45 ವರ್ಷಗಳ ನಂತರ ಮತ್ತೆ ತಾಜ್ ಮಹಲ್ ಆವರಣ ತಲುಪಿದ ಯಮುನೆಯ ನೀರು

- Advertisement -G L Acharya panikkar
- Advertisement -

ದೆಹಲಿಯಲ್ಲಿ ವಿನಾಶವನ್ನು ಉಂಟುಮಾಡಿದ ನಂತರ, ಯಮುನಾ ನದಿ  ನೀರಿನ ಮಟ್ಟ ಆಗ್ರಾದಲ್ಲಿ  495.8 ಅಡಿ ಏರಿಕೆ ಆಗಿದೆ. ‘ಕಡಿಮೆ ಪ್ರವಾಹದ ಮಟ್ಟ’ದ ಹಂತವನ್ನು ದಾಟಿದ ಯಮುನೆ 45 ವರ್ಷಗಳ ನಂತರ ಇದೇ ಮೊದಲ ಬಾರಿಗೆ ತಾಜ್ ಮಹಲ್   ಆವರಣ ತಲುಪಿದೆ.  1978 ರ ಪ್ರವಾಹದ ಸಮಯದಲ್ಲಿ ಯಮುನಾ ಕೊನೆಯ ಬಾರಿ ತಾಜ್ ಮಹಲ್ ಆವರಣ ತಲುಪಿದ್ದು , ನೀರಿನ ಮಟ್ಟವು ಅಂದು 495 ಅಡಿಗಳಷ್ಟು ‘ಕಡಿಮೆ-ಪ್ರವಾಹ ಮಟ್ಟವನ್ನು’ ಮೀರಿ 497.9 ಅಡಿಗಳನ್ನು ತಲುಪಿತ್ತು.
ಮುಂಜಾಗ್ರತಾ ಕ್ರಮವಾಗಿ ಸಿಕಂದ್ರದ ಕೈಲಾಸ ದೇಗುಲದಿಂದ ತಾಜ್ ಮಹಲ್ ಬಳಿಯ ದಸರಾ ಘಾಟ್​​ವರೆಗೆ ನದಿ ಘಾಟ್‌ಗಳಲ್ಲಿ ಪ್ರವಾಹ ತಡೆಯಲು ಅಧಿಕಾರಿಗಳು ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ.ಆಗ್ರಾದಲ್ಲಿ ಪ್ರವಾಹದಂತಹ ಪರಿಸ್ಥಿತಿಯ ನಡುವೆ ಅಧಿಕಾರಿಗಳು ಪರಿಹಾರ ಸಿದ್ಧತೆಯನ್ನು ಹೆಚ್ಚಿಸಿದ್ದಾರೆ. ನದಿಯು ಉಕ್ಕಿ ಹರಿಯಲು ಪ್ರಾರಂಭಿಸಿದಾಗ, ಹತ್ತಿರದ ರಸ್ತೆಗಳು ಮತ್ತು ತಾಜ್‌ಗಂಜ್‌ನ ಸ್ಮಶಾನವನ್ನು ಮುಳುಗಿಸಿದ್ದು, ಇತ್ಮದ್-ಉದ್-ದೌಲಾ ಸ್ಮಾರಕದ ಗೋಡೆಯನ್ನು ಮುಟ್ಟಿತು. ತಾಜ್ ಮಹಲ್‌ಗೆ ಹೋಗುವ ಯಮುನಾ ಕಿನಾರಾ ರಸ್ತೆ ಕೂಡಾ ಜಲಾವೃತವಾಗಿದೆ ಎಂದು ಪಿಟಿಐ ವರದಿ ಮಾಡಿದೆ.

- Advertisement -

Related news

error: Content is protected !!