Friday, April 26, 2024
spot_imgspot_img
spot_imgspot_img

ಆಹಾರ ಉದ್ಯಮದ ವ್ಯಾಪಾರಸ್ಥರಿಗೆ ತರಬೇತಿ ಮತ್ತು ಪ್ರಮಾಣ ಪತ್ರ ಕಡ್ಡಾಯ

- Advertisement -G L Acharya panikkar
- Advertisement -

ಕಡಬ: ವಿವಿಧ ಆಹಾರ ಉದ್ಯಮದ ವ್ಯಾಪಾರಸ್ಥರಿಗೆ ಆಹಾರ ಸೇವೆಗಳ ಗುಣಮಟ್ಟವನ್ನು ಬಲಪಡಿಸುವ ಸಲುವಾಗಿ ಎಫ್.ಎಸ್.ಎಸ್.ಎ.ಐ ಪ್ರಾಧಿಕಾರ ಎಂಬ ಫೋಸ್ಟಾಕ್ ಕಾರ್ಯಕ್ರಮದ ಮೂಲಕ ತರಬೇತಿ ಮತ್ತು ಪ್ರಮಾಣ ಪತ್ರವನ್ನು ಪಡೆಯಬೇಕೆಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಕ್ರಮದ ಮೂಲಕ ಆಹಾರ ಗುಣಮಟ್ಟ ಮತ್ತು ಸ್ವಚ್ಚತ ಕಾಳಜಿಯನ್ನು ಬೆಳೆಸಲು ಪ್ರತಿಯೊಬ್ಬರು ಕಡ್ಡಾಯವಾಗಿ ತರಬೇತಿ ಮತ್ತು ಪ್ರಮಾಣ ಪತ್ರ ಪಡೆಯಬೇಕು, ಎಫ್.ಎಸ್.ಎಸ್.ಎ.ಐ ಶಿಫಾರಸ್ಸಿನಂತೆ ಎಲ್ಲಾ ಆಹಾರ ಉದ್ಯಮದವರು ವ್ಯಾಪಾರ ನಡೆಸುವ ಹಾಗೂ ಆಹಾರ ತಯಾರಿಸುವ ಜಾಗದಲ್ಲಿ ಕನಿಷ್ಠ 25 ಜನರಿಗೆ ಒಬ್ಬರಂತೆ ತರಬೇತಿ ಪಡೆದು ಪ್ರಮಾಣ ಪತ್ರ ಹೊಂದಿರುವ ಆಹಾರ ನಿರ್ವಾಹಕರು ಇರಬೇಕು ಎಂದು ತಿಳಿಸಿದ್ಧಾರೆ.

ಈ ತರಬೇತಿಯಿಂದ ಉತ್ಪಾದಕತೆಯನ್ನು ಹೆಚ್ಚಿಸಲು , ಹೆಚ್ಚಿನ ಜ್ಞಾನ ಹೊಂದಲು, ಆದಾಯ ಹೆಚ್ಚಿಸಲು, ಆಹಾರ ಉದ್ಯಮದ ಭವಿಷ್ಯದ ಉನ್ನತಿಕರಣಕ್ಕಾಗಿ, ಆಹಾರ ಉದ್ದಿಮೆದಾರರು ತರಬೇತಿಯ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ತರಬೇತಿಯ ಜೊತೆಗೆ ಎಫ್.ಎಸ್.ಎಸ್.ಎ.ಐ ಪರವಾನಿಗೆ ಅಥವಾ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ. ವೆಬ್ ಸೈಟ್ https:\foscos.fssai.gov.in ಮೂಲಕ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!