Friday, June 5, 2026
spot_imgspot_img
spot_imgspot_img

ಕಬಕದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಶ್ರೀ ಮಹಾದೇವಿ ಯುವಕ ಮಂಡಲದ ಬೆಳ್ಳಿ ಹಬ್ಬದ ಪ್ರಯುಕ್ತ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ

- Advertisement -
- Advertisement -

ಕಬಕ: ಕಬಕದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಶ್ರೀ ಮಹಾದೇವಿ ಯುವಕ ಮಂಡಲದ ಬೆಳ್ಳಿ ಹಬ್ಬದ ಪ್ರಯುಕ್ತ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮವು ದಿನಾಂಕ :08/09/2024ರಂದು ಕಬಕ ಸೀಗೆತ್ತಾಡಿ ಗದ್ದೆಯಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಪೋಳ್ಯ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಅಧ್ಯಕ್ಷರು ದೀಪ ಬೆಳಗಿಸಿ ಕಬಕ ಗ್ರಾಮದಲ್ಲಿ ಉತ್ಸಾಹಿ ಯುವಕರ ತಂಡವನ್ನು ನೋಡಿ ಬಹಳ ಸಂತೋಷವಾಯಿತು ಇನ್ನು ಮುಂದೆಯೂ ಇಂತಹ ಕಾರ್ಯಕ್ರಮಕ್ಕೆ ತನ್ನ ಬೆಂಬಲ ಇದೆ ಎಂದು ಶುಭಹಾರೈಸಿದರು.

ಮಾನ್ಯ ಶಾಸಕರು ಮಾತನಾಡಿ ನೂತನ ಕಟ್ಟಡಕ್ಕೆ ಸರಕಾರದಿಂದ ಸಿಗುವಂತಹ ಅನುದಾನದಿಂದ 5ಲಕ್ಷವನ್ನು ಕೊಡಿಸುತ್ತೇನೆ ಮತ್ತು ಕಬಕ ಶ್ರೀ ಮಹಾದೇವಿ ಯುವಕ ಮಂಡಲದ ಕಬಡ್ಡಿ ತಂಡಕ್ಕೆ ಮ್ಯಾಟ್ ಕೊಡಿಸುವುದಾಗಿ ಭರವಸೆ ನೀಡಿದರು.

ಸಮಾರೋಪ ಸಮಾರಂಭದಲ್ಲಿ ಯುವಕ ಮಂಡಲದ ಸ್ಥಾಪಕ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮಾತನಾಡಿ ಇಪ್ಪತೈದು ವರ್ಷಗಳ ಹಿಂದೆ ನಾನು ಕಾರ್ಯದರ್ಶಿ ಆಗಿದ್ದ ಸಮಯ ದಲ್ಲಿ ಅಧಿಕೃತವಾಗಿ ಶ್ರೀ ಮಹಾದೇವಿ ಯುವಕ ಮಂಡಲ (ರಿ ) ಇಂದು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಕ್ರೀಡಾಕ್ಷೇತ್ರ ದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಈಗ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ತನ್ನ ಕಾರ್ಯ ಚಟುವಟಿಕೆಗಳಿಗೆ ಅತೀ ಅಗತ್ಯವಾದ ನೂತನ ಸುಸಜ್ಜಿತ ಸ್ವಂತ ಕಟ್ಟಡನಿರ್ಮಿಸಿ ಇದೇ ಬರುವ 29ನೇ ತಾರೀಕಿನಂದು ಉದ್ಘಾಟನೆ ಗೊಳ್ಳಲಿರುವ ಶುಭ ಸಮಯ ದ ಅಂಗವಾಗಿ ಈ ದಿವಸ ಕಬಕ ಪರಿಸರ ದಲ್ಲಿ ಪ್ರಥಮ ವಾಗಿ ಕೆಸರ್ಡೊಂಜಿ ದಿನ ಕಾರ್ಯಕ್ರಮ ದಲ್ಲಿ ಭಾಗವಹಿಸಲು ತುಂಬಾ ಸಂತೋಷ ವಾಗುತ್ತಿದೆ ಎಂದು ನವಚೇತನ ಚಿಟ್ಸ್ ಪಂಡಿನ MD ಲೋಕೇಶ್ ಶೆಟ್ಟಿಯವರು ಹೇಳಿದರು. ಶ್ರೀ ಮಹಾದೇವಿ ಯುವಕ ಮಂಡಲದ ವತಿಯಿಂದ ನಡೆದ ಕೆಸರ್ ಡೊಂಜಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಮಾತಾಡುತ್ತ ಯುವಕ ಮಂಡಲದ ಸಮಾಜಮುಖಿ ಕಾರ್ಯಗಳು ಇನ್ನಷ್ಟು ವಿಸ್ತರವಾಗಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಬೆಳಗಲಿ ಎಂದು ಶುಭ ಹಾರೈಸಿದರು.

ಯುವಕ ಮಂಡಲದ ಈ ಕಾರ್ಯಕ್ರಮದಲ್ಲಿ ಕಬಕ ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ಬಾಬು. ಟಿ, ಶ್ರೀ ಅಡ್ಯಾಲಯ ಮತ್ತು ಪರಿವಾರ ದೈವಗಳ ಸೇವಾ ಸಮಿತಿಯ ಅಧ್ಯಕ್ಷರು ಸತೀಶ್ ರೈ ಡಿಂಬ್ರಿಗುತ್ತು, ಶ್ರೀ ಮಹಾದೇವಿ ಧರ್ಮ ಸೇವಾ ವಿಶ್ವಸ್ಥ ಮಂಡಳಿಯ ಅಧ್ಯಕ್ಷರು ವಿ. ಚಂದ್ರಶೇಖರ್ ನಾಯ್ಕ್,ಸದಸ್ಯರು ಸದಾಶಿವ ನಾಯ್ಕ್,ಕೋಲ್ಪೆ ಗುತ್ತು ರಾಜಾರಾಮ್ ಶೆಟ್ಟಿ, ಬೆಳ್ತಂಗಡಿ ಎ, ಎಸ್. ಐ ರವೀಶ್, ಪುರಷೋತ್ತಮ್ ಮುಂಗ್ಲಿಮನೆ, ಕೃಷ್ಣಪ್ಪ ಅಡ್ಯಾಲು, ಪಂಚಾಯತ್ ಉಪಾಧ್ಯಕ್ಷರು ಗೀತಾ ಪದ್ನಡ್ಕ, ಶ್ರೀ ಮಹಾದೇವಿ ಮಹಿಳಾ ಮಂಡಲದ ಅಧ್ಯಕ್ಷರು ಭಾರತಿ, ಕಾರ್ಯದರ್ಶಿ ರೇಷ್ಮಾ ನೆಕ್ಕರೆ, ಪ್ರಗತಿ ಕೃಷಿಕರು ಲಕ್ಷ್ಮೀ ಸೀಗೆತ್ತಾಡಿ,ಕಬಕ ಪಂಚಾಯತ್ ಸದಸ್ಯರು ರುಕ್ಮಯ ಗೌಡ ಪೋಳ್ಯ, ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ಅಳಕೇಮಜಲು, ಜಗದೀಶ್ ಅಳಕೇಮಜಲು, ಯುವಕ ಮಂಡಲದ ಕಾರ್ಯದರ್ಶಿ ಯತೀಶ್ ಪದ್ನಡ್ಕ, ಯುವಕ ಮಂಡಲದ ಅಧ್ಯಕ್ಷರು ಸ್ವಾಗತಿಸಿ, ಬೆಳ್ಳಿಹಬ್ಬ ಸಮಿತಿ ಕಾರ್ಯದರ್ಶಿ ವಂದಿಸಿದರು

- Advertisement -

Related news

error: Content is protected !!