Monday, June 22, 2026
spot_imgspot_img
spot_imgspot_img

ಕಾಸರಗೋಡು : ನಾಲ್ಕು ತಿಂಗಳ ಹಿಂದೆ 70 ಲಕ್ಷ ರೂ.ಲಾಟರಿ ಗೆದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ

- Advertisement -
- Advertisement -

ಕಾಸರಗೋಡು : ನಾಲ್ಕು ತಿಂಗಳ ಹಿಂದೆ ಕೇರಳ ರಾಜ್ಯ ಲಾಟರಿ ಯ 70 ಲಕ್ಷ ರೂ. ಗೆದ್ದಿದ್ದ ಯುವಕ ಬೇಕರಿ ಅಂಗಡಿಯೊಳಗಡೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಗರದ ನೆಲ್ಲಿಕುಂಜೆ ಯಲ್ಲಿ ನಡೆದಿದೆ

ಬಂಗ್ರಗುಡ್ಡೆಯ ವಿವೇಕ್ ಶೆಟ್ಟಿ (38) ಮೃತ ಪಟ್ಟವರು ಎಂದು ಗುರುತಿಸಲಾಗಿದೆ. ಬೆಳಿಗ್ಗೆ 10 ಗಂಟೆ ಸುಮಾರಿಗೆ ನೆಲ್ಲಿಕುಂಜೆ ರಸ್ತೆಯ ಬೇಕರಿ ಅಂಗಡಿಯೊಳಗಡೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಶಟರ್ ಮುಚ್ಚಿರುವುದರಿಂದ ಸಂಶಯಗೊಂಡು ಸಹೋದರ ತೆರೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ವಿವೇಕ್ ಗೆ ನಾಲ್ಕು ತಿಂಗಳ ಹಿಂದೆ ಕೇರಳ ರಾಜ್ಯ ಲಾಟರಿಯ ಪ್ರಥಮ ಬಹುಮಾನ 70 ಲಕ್ಷ ರೂ. ಲಭಿಸಿತ್ತು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!