Monday, April 29, 2024
spot_imgspot_img
spot_imgspot_img

ಸುಳ್ಯ:ಉದ್ಯೋಗ ನೀಡುವ ಭರವಸೆ ನೀಡಿ ಯುವತಿಗೆ ವಂಚನೆ

- Advertisement -G L Acharya panikkar
- Advertisement -

ಸುಳ್ಯ: ಖಾಸಗಿ ಕಂಪೆನಿ ಹೆಸರು ಹೇಳಿಕೊಂಡು ಅಪರಿಚಿತ ವ್ಯಕ್ತಿಯೊಬ್ಬರು ಉದ್ಯೋಗ ನೀಡುವ ಭರವಸೆ ನೀಡಿ ಆನ್ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ಯುವತಿ ಯೊಬ್ಬರಿಗೆ ವಂಚನೆ ಮಾಡಿರುವ ಘಟನೆ ಸುಳ್ಯ ಅಮರಪಡ್ನೂರು ಎಂಬಲ್ಲಿ ನಡೆದಿದೆ

ಸುಳ್ಯ : ಅಮರಪಡ್ನೂರು ಗ್ರಾಮದ ನಿವಾಸಿ ಯಶ್ವಿನಿ ಕೆ ಬಿ ಎಂಬವರ ದೂರಿನಂತೆ ಅಪರಿಚಿತ ವ್ಯಕ್ತಿಯೊಬ್ಬರು ಕರೆಮಾಡಿ ತಾನು Vistara Airlines , Singapore Branch, Devanahalli Bangalore ಎಂಬ ಸಂಸ್ಥೆಯಿಂದ ಕರೆಮಾಡುತ್ತಿದ್ದು, ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಖಾಲಿಯಿದ್ದು, ಈ ಉದ್ಯೋಗದಲ್ಲಿ ಹೆಚ್ಚಿನ ಸಂಬಳ ಹಾಗೂ ಇನ್ನಿತರ ಸೌಲಭ್ಯಗಳು ನೀಡುವುದಾಗಿ ತಿಳಿಸಿದ್ದು,ಸದರಿ ಉದ್ಯೋಗವನ್ನು ಯಶ್ವಿನಿ ಯವರಿಗೆ ನೀಡುವುದಾಗಿ ತಿಳಿಸಿ, ಹಂತ ಹಂತವಾಗಿ ವಿವಿಧ ನೆಪಗಳನ್ನು ಹೇಳಿ ಒಟ್ಟು ರೂ 13,00,997 ಗಳನ್ನು ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡು, ಈವರೆಗೆ ಉದ್ಯೋಗ ನೀಡದೇ ಮೋಸ ಮಾಡಿರುತ್ತಾರೆ.

ಘಟನೆ ಸಂಬಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿಅಕ್ರ: 67/2023 ಕಲಂ 419,420 ಐಪಿಸಿ ಮತ್ತು ಕಲಂ: 66(ಡಿ) ಐಟಿ ಆಕ್ಟ್ ನಂತೆ ಪ್ರಕರಣ ದಾಕಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!