Tuesday, April 30, 2024
spot_imgspot_img
spot_imgspot_img

ಬೆಳ್ತಂಗಡಿ: ಫೇಸ್ ಬುಕ್ ಆಪ್ ಮೂಲಕ ಸಾಲ ನೀಡುವುದಾಗಿ ನಂಬಿಸಿ ವಂಚನೆ: ಸಾವಿರಾರು ರೂ. ಗಳನ್ನು ಕಳೆದುಕೊಂಡ ಮಹಿಳೆ

- Advertisement -G L Acharya panikkar
- Advertisement -

ಬೆಳ್ತಂಗಡಿ: ಮಹಿಳೆಯೊಬ್ಬರಿಗೆ ಫೇಸ್ ಬುಕ್ ಆಪ್ ಮೂಲಕ ಸಾಲ ನೀಡುವುದಾಗಿ ನಂಬಿಸಿ ವಂಚನೆ ನಡೆಸಿದ ಘಟನೆ ತೆಂಕಕಾರಂದೂರು ಗ್ರಾಮದಲ್ಲಿ ನಡೆದಿದೆ.

ನೆಬಿಸಾ (38) ಎಂಬವರು ವಂಚನೆಗೊಳಗಾದ ಮಹಿಳೆ.

ನೆಬಿಸಾರವರು ಮಾ. 21 ರಂದು ಫೇಸ್ ಬುಕ್ ನಲ್ಲಿ Money View Personal Loan (LTD) ಆಪ್‌ ಮೂಲಕ, ಅಪರಿಚಿತ ಆರೋಪಿಗಳು ಪರಿಚಯಿಸಿಕೊಂಡಿದ್ದರು. ನೆಬಿಸಾ ಅವರು ಸಾಲದ ಬಗ್ಗೆ ಅಪರಿಚಿತರಿಂದ ಮಾಹಿತಿ ಪಡೆದು 5 ಲಕ್ಷ ರೂ.ಸಾಲ ಪಡೆಯಲು ದಾಖಲೆಗಳನ್ನು ಕಳುಹಿಸಿದ್ದರು. ಬಳಿಕ ಪೋನ್ ಮೂಲಕ ನೆಬಿಸಾ ಅವರನ್ನು ಸಂಪರ್ಕಿಸಿ, ಮಾ.28ರ ತನಕ ವಿವಿಧ ಹಂತದಲ್ಲಿ ಒಟ್ಟು 96,743ರೂ. ಗಳನ್ನು ಹಣವನ್ನು ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಬಳಿಕ ಸಾಲವನ್ನು ನೀಡದೇ, ವರ್ಗಾಯಿಸಿಕೊಂಡ ಹಣವನ್ನು ಹಿಂತಿರುಗಿಸದೇ ವಂಚಿಸಿದ್ದಾರೆ.

ನೆಬಿಸಾರವರು ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣಾ ಅ.ಕ್ರ 35/2024 ಕಲಂ: 66 (C), (D) IT Act & ಕಲಂ: 417,420 IPC ACT ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ

- Advertisement -

Related news

error: Content is protected !!