Sunday, June 14, 2026
spot_imgspot_img
spot_imgspot_img

ಲೋಕಾಯುಕ್ತ ಡಿವೈಎಸ್ಪಿ ಸೋಗಿನಲ್ಲಿ ವಂಚನೆ; ಆರೋಪಿಯ ಬಂಧನ..!

- Advertisement -
- Advertisement -

ವಿಜಯಪುರ: ಲೋಕಾಯುಕ್ತ ಡಿವೈಎಸ್ಪಿ ಎಂದು ಕರೆ ಮಾಡಿ ವಂಚನೆಗೆ ಯತ್ನಿಸಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಮೂಲದ ಮುರಿಗೆಪ್ಪ ಎಂದು ಗುರುತಿಸಲಾಗಿದೆ.

ಲೋಕಾಯುಕ್ತ ಡಿವೈಎಸ್ಪಿ ಎಂದು ನಂಬಿಸಿ, ಕೆಬಿಜೆಎನ್‌ಎಲ್‌ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಶೋಕ ಬಿರಾದಾರ ಅವರಿಗೆ ಕರೆ ಮಾಡಿ 70 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಜ.23ರಂದು ಪ್ರಕರಣ ದಾಖಲಾಗಿತ್ತು.

ಈತನ ವಿರುದ್ಧ ಒಟ್ಟು 57 ಪ್ರಕರಣಗಳು ದಾಖಲಾಗಿದ್ದು, ಮೋಸ, ವಂಚನೆ ಹಾಗೂ ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿವೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಆರೋಪಿ ಕೃತ್ಯಗಳನ್ನು ಎಸಗಿರುವುದಾಗಿ ತಿಳಿದು ಬಂದಿದೆ. ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದ ಪೊಲೀಸರು ಮಹರಾಷ್ಟ್ರದ ಶಿರೋಳ ತಾಲೂಕಿನಲ್ಲಿ ವಶಕ್ಕೆ ಪಡೆದಿದ್ದಾರೆ.

- Advertisement -

Related news

error: Content is protected !!