Wednesday, May 8, 2024
spot_imgspot_img
spot_imgspot_img

ವಿಟ್ಲ: ಸಾಕು ನಾಯಿಗಳಿಗೆ ಉಚಿತ ಹುಚ್ಚು ನಿರೋಧಕ ಚುಚ್ಚುಮದ್ದು ನೀಡುವ ಕಾರ್ಯಕ್ರಮ

- Advertisement -G L Acharya panikkar
- Advertisement -
vtv vitla

ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವಿಟ್ಲ ಹಾಗೂ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಇದರ ಜಂಟಿ ಆಶ್ರಯದಲ್ಲಿ ಸಾಕು ನಾಯಿಗಳಿಗೆ ಉಚಿತ ಹುಚ್ಚು ನಿರೋಧಕ ಚುಚ್ಚುಮದ್ದು ನೀಡುವ ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷ ಪುನೀತ್ ಮಾಡತ್ತಾರ್ ರವರು ದೀಪೋಜ್ವಲನೆ ಮಾಡುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷೆ ರೋಹಣಿ. ಡಿ, ಪಂಚಾಯತ್ ಸದಸ್ಯರಾದ ಚಂದ್ರಾವತಿ, ಮಹಾಬಲೇಶ್ವರ ಭಟ್, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವಿಟ್ಲ ಇದರ ಮುಖ್ಯ ಪಶು ವೈಧ್ಯಾಧಿಕಾರಿ ಡಾ. ಪರಮೇಶ್ವರ ನಾಯ್ಕ, ಜಾನುವಾರು ಅಧಿಕಾರಿ ಈಶ್ವರ ಭಟ್, ಹಿರಿಯ ಪಶು ವೈದ್ಯಕೀಯ ಪರೀಕ್ಷಕರು ಮಂದಾರ ಜೈನ್ ಹಾಗೂ ರಮೇಶ್ ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ವ್ಯಾಪ್ತಿಯ 10 ಕೇಂದ್ರಗಳಲ್ಲಿ ಹುಚ್ಚು ನಿರೋಧಕ ಚುಚ್ಚುಮದ್ದು ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಗ್ರಾಮ ಪಂಚಾಯತ್ ಸಿಬ್ಬಂದಿಗಳು , ಗ್ರಾಮ ಮಟ್ಟದ ಪಶು ಸಖಿ ಹಾಗೂ ಚಿಗುರು ಸಂಜೀವಿನಿ ಒಕ್ಕೂಟ ಎಮ್ ಬಿ ಕೆ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಯ.ಕೆ ರವರು ಸ್ವಾಗತಿಸಿ ವಂದಿಸಿದರು.

- Advertisement -

Related news

error: Content is protected !!