Friday, March 29, 2024
spot_imgspot_img
spot_imgspot_img

ಸ್ವಾತಂತ್ರ ಹೋರಾಟಗಾರ ತಡಂಗಡಿ ಭೋಜರಾಜ ಹೆಗ್ಡೆ.

- Advertisement -G L Acharya panikkar
- Advertisement -

ಬೆಳ್ತಂಗಡಿ:-1942ನೇ ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ )ಚಳುವಳಿಯ ಸಂದರ್ಭ ಮಂಗಳೂರಿನ ನೆಹರೂ ಮೈದಾನದಲ್ಲಿ ಸ್ವಾತಂತ್ರ ಯೋಧ ಎಂ.ಡಿ ಅಧಿಕಾರಿ ಅವರ ಕ್ರಾಂತಿಕಾರಿ ಭಾಷಣದಿಂದ ವಿದೇಶ ವಸ್ತುಗಳಿಗೆ ದಿಕ್ಕಾರ ನಡೆದ ಸಮಯ. ಮಂಗಳೂರಿಗೆ 60ಕಿಲೋ ಮೀಟರ್ ದೂರದ ಬೆಳ್ತಂಗಡಿಯಿಂದ. ವೇಣೂರು-ಮೂಡಬಿದಿರೆ ರಸ್ತೆ ಮೂಲಕ ಯುವಕನಾಗಿದ್ದ ಭೋಜರಾಜ ಹೆಗ್ಡೆ ಕುಂಝಣ್ಣ ಮಾಸ್ತರ ಆವರೊಟ್ಟಿಗೆ ಸೈಕಲ್ ಏರಿ ಹೊರಟವರು ಕ್ವಿಟ್ ಇಂಡಿಯಾದ ಕ್ರಾಂತಿಕಾರೀ ಭಾಷಣದ ಮದ್ಯೆ ಬಿಸಿ ರಕ್ತದಲ್ಲಿ ಕುದಿಯುವ ಯುವಕನಿಗೆ ಪರದೇಶಿ ವಸ್ತುಗಳಿಗೆ ದಿಕ್ಕಾರ ಅಂತಾ ಹೇಳಿದ್ದಷ್ಟೇ ,ಅಗಲೇ ಬ್ರಿಟಿಷ್ ಪೊಲೀಸ್ ಪೇದೆಯ ಲಾಠಿಯ ಪೆಟ್ಟು ಬಿದ್ದಿತ್ತು.

ಅವನು ಇನ್ನೂ ಚಿಕ್ಕವನು ಮನೆಗೆ ಹೋಗ್ಲಿ ಅಂತಾ ಅಲ್ಲಿದ್ದವರು ಓಡಿಸಿದರು.ಹಾಗೇ ಓಡಿದವನು ಮಂಗಳೂರಿನ ರಥಬೀದಿಯ ಖಾದಿ ಭಂಡಾರ ಅಂಗಡಿಯತ್ತ ಖಾದಿಯವರು ಖಾದಿ ನೂಲು ಕೊಡದೆ ಖಾದಿ ವಸ್ತ್ರ ನೀಡುವಂತಿಲ್ಲ ಅಂತಾ ಶರತ್ತು ಆ ಕಾಲದಲ್ಲಿತ್ತು .ಆಗ ಖಾದಿ ನೂಲು ಕೊಟ್ಟವರು ಐತ್ತಪ್ಪ ಅನ್ನುವವರು ಅವರಿಂದ ಕೇವಲ ಒಂದೂವರೆ ರೂಪಾಯಿಯಲ್ಲಿ ಪಡೆದ ಖಾದಿ ಆಂದು ಖಾದಿ ಬಟ್ಟೆ ತೊಟ್ಟವರೂ ಇಂದು ಕೂಡಾ ಅಪ್ಪಟ್ಡ ಗಾಂಧಿ ತತ್ವದಲ್ಲೇ ಪಾಲನೆ ಮಾಡುವವರು ಮತ್ತು ಪ್ರತಿಭಟನೆಯಲ್ಲಿ ಪಾಲುಗೊಂಡು ನಂತರ ಕೇಸು ದಾಖಲಾಗಿ ಪ್ರತಿವಾರ ಸೋಮವಾರದಂದು ಬೆಳ್ತಂಗಡಿಯ ಪೊಲೀಸ್ ಠಾಣೆಯಲ್ಲಿ ಸಹಿ ಹಾಕುವಂತಾಯಿತು. ಪಡಂಗಡಿ ಭೋಜರಾಜ ಹೆಗ್ಡೆ ಈಗ ಆವರಿಗೆ 98ರ ವಯಸ್ಸು.

ಸ್ವಾತಂತ್ರದ ಚಳುವಳಿಯನ್ನ ಎಳೆಎಳೆಯಾಗಿ ಬಿಚ್ಚಿಡುವ ಸರಳ ಸಜ್ಜನಿಕೆಯ ,ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀಯನ್ನ ಮನಸಾರೆ ಮೆಚ್ಚಿ ಆವರ ತತ್ವವನ್ನೇ ಇಂದಿಗೂ ಕಟ್ಟುನಿಟ್ಟಾಗಿ ಪಾಲನೆ ಮಾಡಿದವರು ಭೋಜರಾಜ ಹೆಗ್ಡೆ.ಮಂಗಳೂರಿನಲ್ಲಿ ಲಾಲ್ ಬಹಾದ್ದೂರ್ ಬಂದಾಗ ಅವರನ್ನೇ ಭೇಟಿ ಮಾಡಿ ಅವರು ಸ್ವತ ಬಟ್ಟೆ ,ಮನೆಪಾತ್ರಗಳನ್ನ ತೊಳೆಯುದನ್ನ ನೋಡಿ ,ಭೋಜ ರಾಜರು ಇಂದಿಗೂ ಅವರ ತತ್ವವನ್ನೇ ಪಾಲನೆ ಮಾಡುತ್ತಾರೆ. ಅಂದು ಸ್ವಾತಂತ್ರ್ಯ ಹೋರಾಟಗಾರರ ಸದಸ್ಯತ್ವ ವನ್ನ ಪಡೆದವರಲ್ಲಿ ಐದನೇ ಸದಸ್ಯ ಇವರಾಗಿದ್ದಾರೆ. ಇವರನ್ನ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿದವು.1923ರ ಮಾರ್ಚ್ 13ರಂದು ಪಠೇಲ್ ಶಾಂತಿಶೆಟ್ಟಿ ಮತ್ತು ಲಕ್ಮೀಮತಿ ಅವರ ಪುತ್ರನಾಗಿ ಜನಿಸಿದರು.

1947ರಿಂದ 1951ರ ವರೆಗೆ ಮೊಳಹಳ್ಳಿ ಶಿವರಾಯರ ನೆರವಿನಲ್ಲಿ ಬೆಳ್ತಂಗಡಿ ದಕ್ಷಿಣ ಕನ್ನಡ ಆಹಾರ ಸಹಕಾರಿ ಸಂಘದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು.ಧರ್ಮಸ್ಥಳ ಕ್ಷೇತ್ರದ ಕೀರ್ತಿ ಶೇಷ ಮಂಜಯ್ಯ ಹೆಗ್ಗಡೆಯವರಿಂದ ಧಾರ್ಮಿಕ ಮತ್ತು ರಾಜಕೀಯಕ್ಕೆ ಪ್ರರೇಣೆ.1944ರಲ್ಲಿ 21 ವಯಸ್ಸಿಗೆ ದೇಶ ಪ್ರೇಮದ ಕಿಚ್ಚನ್ನು ಕೊಟ್ಟವರು ಅಧ್ಯಾಪಕ ಕುಂಇ್ಣಣ್ಣ ಮಾಸ್ತರರವರು ಅವರು ಕಾಂಗ್ರಸ್ ಪಕ್ಷದ. ಮಂಜಯ್ಯ ಹೆಗ್ಗಡೆಯವರು ನೀಡಿದ ನಾಲ್ಕಾಣೆಗೆ y ಕಾಂಗ್ರಸ್ನ ಸದಸ್ಯತೆಯನ್ನ ಪಡೆದವರು.1924ರಲ್ಲಿ ಅರಂಭವಾದ ಎನ್ ಎನ್ ಹರ್ಡಿಕರ್ ಅವರ ಸೇವಾದಳದಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದವರು ಸ್ವಾತಂತ್ರ ಹೋರಾಟಗಾರ ಭೋಜರಾಜ ಹೆಗ್ಡೆಯವರು. ಇವರು ಈಗ ಬೆಳ್ತಂಗಡಿ ತಾಲೂಕು ಗುರುವಾಯುನಕರೆ ಮತ್ತು ವೇಣೂರು ರಸ್ತೆಯ ತಡಂಗಡಿಯಲ್ಲಿ ಹಳೆಯ ಮನೆಯಲ್ಲೇ ಮಕ್ಕಳ ಜತೆ ವಾಸವಾಗಿದ್ದಾರೆ.

- Advertisement -

Related news

error: Content is protected !!