Wednesday, May 1, 2024
spot_imgspot_img
spot_imgspot_img

ವಿಟ್ಲ: ಫ್ರೆಂಡ್ಸ್ ಕಾಪುಮಜಲಿನಲ್ಲಿ 19ನೇ ವರ್ಷದ ಮೊಸರು ಕುಡಿಕೆ ಉತ್ಸವ

- Advertisement -G L Acharya panikkar
- Advertisement -

ವಿಟ್ಲ ಪಡ್ನೂರ್ ಗ್ರಾಮದ ಫ್ರೆಂಡ್ಸ್ ಕಾಪುಮಜಲು ಇದರ ಆಶ್ರಯದಲ್ಲಿ 19ನೇ ವರ್ಷದ ಮೊಸರು ಕುಡಿಕೆ ಉತ್ಸವವು ಕಾಪುಮಜಲು ಶ್ರೀ ಮಲರಾಯಿ ಮತ್ತು ಮೂವರ್ ದೈವಂಗಳ ದೈವಸ್ಥಾನದ ವಠಾರದಲ್ಲಿ ಬಹಳ ವಿಜ್ರಂಭಣೆಯಿಂದ ನಡೆಯಿತು.

ಅರ್ಚಕರಾದ ಉದಯ ಭಟ್ ಮತ್ತು ನಾಗೇಶ್ ಗೌಡ ಕಾಪುಮಜಲು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ನಡೆದವು. ನಂತರ ಸಂಜೆ ನಡೆದ ಸಮಾರೋಪ ಸಮಾರಂಭವು ವಿಟ್ಲ ಪಡ್ನೂರ್ ಗ್ರಾಮ ಪಂಚಾಯತ್ ಅಧ್ಯಕ್ಷ ಜಯಂತ ಪೂರ್ಲಪ್ಪಾಡಿ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾಗಿ ಕಾಪುಮಜಲು ಶ್ರೀಮಲರಾಯಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಭುಜಂಗ ರೈ ಪಡಾರುಗುತ್ತು ಹಾಗೂ ಅತಿಗಳಾಗಿ ವಿಟ್ಲ ಪಡ್ನೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ರವೀಶ್ ಶೆಟ್ಟಿ ಕರ್ಕಳ, ರಾಜಾರಾಮ್ ಭಟ್ ಬಳಿಪಗುಳಿ, ವಿದ್ಯಾಧರ ರೈ ಚೆಂಬರಡ್ಕ, ನಾಗೇಶ್ ಶೆಟ್ಟಿ ಕೊಡಂಗಾಯಿ, ಅರವಿಂದ ರೈ ಮೂರ್ಜೆಬೆಟ್ಟು, ರೋಹಿತ್ ರೈ ಚೆಂಬರಡ್ಕ, ಪ್ರೇಮಲತಾ ಕೋಡಪದವು, ಹಾಗೂ ಮಾಜಿ ಸೈನಿಕ ನವೀನ್ ಗಾಣದಮನೆ ಭಾಗವಹಿಸಿದ್ದರು.

ಫ್ರೆಂಡ್ಸ್ ಕಾಪುಮಜಲಿನ ಅಧ್ಯಕ್ಷ ವಸಂತ ಪೂಜಾರಿ ಕಾಪುಮಜಲು ಸ್ವಾಗತಿಸಿ, ನಿಶಾ ಕಾಪುಮಜಲು ಬಹುಮಾನ ವಿವರಣೆಯಲ್ಲಿ ಸಹಕರಿಸಿ, ಅನಿಲ್ ಗೌಡ ಕಾಪುಮಜಲು ವಂದಿಸಿ, ಸುಕೇಶ್ ಮಡಿವಾಳ ಕಾಪುಮಜಲು ಕಾರ್ಯಕ್ರಮ ನಿರೂಪಿಸಿದರು. ಫ್ರೆಂಡ್ಸ್ ಕಾಪುಮಜಲು ಇದರ ಸದಸ್ಯರು ಕಾರ್ಯಕ್ರಮದಲ್ಲಿ ಸಹಕರಿಸಿದರು.

- Advertisement -

Related news

error: Content is protected !!