Monday, April 29, 2024
spot_imgspot_img
spot_imgspot_img

ಎಳನೀರಿನಿಂದ ಆರೋಗ್ಯಕ್ಕುಂಟು ನೂರಾರು ಪ್ರಯೋಜನ

- Advertisement -G L Acharya panikkar
- Advertisement -

ಎಳನೀರು ಕುಡಿಯುವುದರಿಂದ ದೇಹ ಹೈಡ್ರೇಟ್‌ ಆಗುತ್ತದೆ. ನಿರ್ಜಲೀಕರಣವನ್ನು ತಪ್ಪಿಸಲು ಇದು ಉತ್ತಮ ಆಯ್ಕೆ. ಇದು ಪೊಟ್ಯಾಶಿಯಂ, ಮೆಗ್ನಿಶಿಯಂ, ಸೋಡಿಯಂನಂತಹ ಎಲೆಕ್ಟ್ರೋಲೈಟ್‌ಗಳಿಂದ ಸಮೃದ್ಧವಾಗಿರುತ್ತದೆ. ಇದು ದೇಹದಲ್ಲಿ ತೇವಾಂಶ ಮರಳಲು ಸಹಾಯ ಮಾಡುತ್ತದೆ. ಈ ಗುಣದ ಕಾರಣದಿಂದ ಇದನ್ನು ʼನೇಚರ್ಸ್ ಸ್ಪೋರ್ಟ್ಸ್ ಡ್ರಿಂಕ್ʼ ಎಂದು ಮಾನಿಟರ್‌ ಮಾಡಲಾಗುತ್ತದೆ.

ಎಳನೀರಿನಲ್ಲಿ ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳು ಲಭ್ಯವಿರುತ್ತವೆ. ವಿಟಮಿನ್‌ ಸಿ, ವಿಟಮಿನ್‌ ಬಿ-ಕಾಂಪ್ಲೆಕ್ಸ್‌, ಕ್ಯಾಲ್ಸಿಯಂ, ಐರನ್‌ ಅಂಶಗಳು ಹೇರಳವಾಗಿರುತ್ತವೆ. ಇದು ಕ್ಯಾಲೊರಿ ಪ್ರಮಾಣವೂ ಕಡಿಮೆ ಇರುತ್ತದೆ. ಕೊಬ್ಬಿನಾಂಶ ಇರುವುದಿಲ್ಲ. ಸಮತೋಲಿತ ಡಯೆಟ್‌ಗೆ ಇದು ಬೆಸ್ಟ್‌.
ಎಳನೀರಿನಲ್ಲಿ ನಾರಿನಾಂಶವಿದ್ದು ಇದು ಜೀರ್ಣಕ್ರಿಯೆ ಸುಧಾರಣೆಗೆ ಸಹಾಯ ಮಾಡುತ್ತದೆ. ಅಜೀರ್ಣ, ಮಲಬದ್ಧತೆ, ಆಸಿಡ್‌ ರಿಫ್ಲಕ್ಸ್‌ನಂತಹ ಸಮಸ್ಯೆಗಳನ್ನೂ ನಿವಾರಿಸುತ್ತದೆ. ಇದರಲ್ಲಿರುವ ಕಿಣ್ವಗಳು ಚಯಾಪಚಯವನ್ನು ವೃದ್ಧಿಸುತ್ತದೆ.

ಎಳನೀರಿನಲ್ಲಿರುವ ಪೊಟ್ಯಾಶಿಯಂ ಹಾಗೂ ಸೋಡಿಯಂ ಅಂಶಗಳು ದೇಹದಲ್ಲಿ ಎಲೆಕ್ಟ್ರೊಲೈಟ್‌ ಸಮತೋಲನಕ್ಕೆ ಸಹಾಯ ಮಾಡುತ್ತವೆ. ಇದು ದೈಹಿಕ ಚಟುವಟಿಕೆ ಹಾಗೂ ಕ್ರೀಡೆಯಲ್ಲಿ ಹೆಚ್ಚು ತೊಡಗುವವರಿಗೆ ಬಹಳ ಅವಶ್ಯ. ಇದು ಸ್ನಾಯು ಸೆಳೆತ ಹಾಗೂ ಆಯಾಸವನ್ನು ನಿವಾರಿಸುತ್ತದೆ.
ಪ್ರತಿನಿತ್ಯ ಎಳನೀರು ಸೇವಿಸುವುದರಿಂದ ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಮೊಡವೆಗಳ ನಿವಾರಣೆಗೂ ಎಳನೀರು ಸೇವನೆ ಉತ್ತಮ.

ಎಳನೀರು ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿದೆ. ಇದು ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ತಡೆಯಲು ಮತ್ತು ಒಟ್ಟಾರೆ ಮೂತ್ರಪಿಂಡದ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.

ಆದರೆ ಎಳನೀರು ಕುಡಿಯುವ ಮುನ್ನ ಸಾಕಷ್ಟು ಮುನ್ನೆಚ್ಚರಿಕೆಯನ್ನೂ ವಹಿಸಬೇಕು. ಮಧುಮೇಹ ಹೊಂದಿರುವವರಲ್ಲಿ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದ ಏರಿಕೆಗೆ ಕಾರಣವಾಗಬಹುದು.

- Advertisement -

Related news

error: Content is protected !!