Saturday, April 20, 2024
spot_imgspot_img
spot_imgspot_img

ಕಾರ್ಕಳ: ಪಡಿತರ ಅಂಗಡಿಯಲ್ಲಿ ವಿತರಣೆಯಾದ ಬೆಳ್ತಿಗೆ ಅಕ್ಕಿಯಲ್ಲಿ ಮಿಶ್ರಿತ ಪ್ಲಾಸ್ಟಿಕ್ ಅಕ್ಕಿ ಪತ್ತೆ!

- Advertisement -G L Acharya panikkar
- Advertisement -

ಕಾರ್ಕಳ: ಬೆಳ್ಮಣ್ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಗೆ ನೀಡಲಾಗಿರುವ ಬೆಳ್ತಿಗೆ ಅಕ್ಕಿಯಲ್ಲಿ ಮಿಶ್ರಿತವಾದ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ.

ಕಾರ್ಕಳ ತಾಲೂಕಿನ ಬೆಳ್ಮಣ್ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಗೆ ಸರಕಾರದ ಆಹಾರ ಇಲಾಖೆಯಿಂದ ನೀಡಲಾದ ಬೆಳ್ತಿಗೆ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ. ಈ ಅಕ್ಕಿ ನೋಡಿದ ಗ್ರಾಮಸ್ಥರು ಕಂಗಾಲಾಗಿ ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ದಾರೆ. ಅವರಿಗೆ ನೀಡಿದ ಅಕ್ಕಿಯನ್ನು ಪರಿಶೀಲಿಸಿದಾಗ ಅದು ಪ್ಲಾಸ್ಟಿಕ್ ಅಕ್ಕಿಯೇ ಇರಬಹುದು ಎನ್ನುವ ಅನುಮಾನ ಸ್ಪಷ್ಟವಾಗಿದೆ.

ಗ್ರಾಮ ಪಂಚಾಯತ್ ಈ ಕುರಿತು ಕಾರ್ಕಳದ ಪಡಿತರ ಮುಖ್ಯ ಕೇಂದ್ರಕ್ಕೆ ಹಾಗೂ ಆಹಾರ ಇಲಾಖೆಯ ಅಧಿಕಾರಿಗೆ ತಿಳಿಸಿದ ಪರಿಣಾಮ ಇಲಾಖೆಯ ಅಧಿಕಾರಿಗಳು ಈ ಕುರಿತು ಪರಿಶೀಲನೆ ಆರಂಭಿಸಿದ್ದಾರೆ ಎಂದು ಬೆಳ್ಮಣ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹೇಳಿದ್ದಾರೆ. ಅಲ್ಲದೇ ಈಗಾಗಲೇ ಅಕ್ಕಿ ಪಡೆದಿರುವ ಗ್ರಾಹಕರು ವಾಪಸ್ಸು ನೀಡುವಂತೆ ತಿಳಿಸಿಲಾಗಿದೆ ಎಂದರು.

ಆದರೆ ಈಗಾಗಲೇ ಇಲಾಖೆಯಿಂದ ಕಲಬೆರಕೆ ಪ್ಲಾಸ್ಟಿಕ್ ಅಕ್ಕಿ ಪಡೆದವರು ಮಾತ್ರ ಅಕ್ಕಿ ಬೇಯಿಸಲಾಗದೇ ‘ನಾವು ಈ ಪ್ಲಾಸ್ಟಿಕ್ ಅಕ್ಕಿ ತಿಂದು ಸಾಯಬೇಕೇ? ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

driving
- Advertisement -

Related news

error: Content is protected !!