- Advertisement -
- Advertisement -

ಹುಬ್ಬಳ್ಳಿ: ವ್ಯಕ್ತಿಯೋರ್ವನಿಗೆ ಚೂರಿ ಇರಿತ ಮಾಡಿರುವ ಘಟನೆ ಹಳೇ ಹುಬ್ಬಳ್ಳಿ ಹೆಗ್ಗೇರಿಯಲ್ಲಿ ನಡೆದಿದೆ.
ಹಳೇಹುಬ್ಬಳ್ಳಿ ನಿವಾಸಿ ಆಸೀಫ್ ಗಂಭೀರ ಗಾಯಗೊಂಡಿದ್ದು, ಕಿಮ್ಸ್ ಗೆ ದಾಖಲಿಸಲಾಗಿದೆ. ಮಾರುತಿ ನಗರದ ನಿವಾಸಿಯಾದ ರೆಹಮತ್ ಮತ್ತು ಗೌಸ್ ಎಂಬವರು ಚಾಕು ಇರಿದ ಆರೋಪಿಗಳು.

ಇವರು ಮೂವರು ಕೂಡ ಸ್ನೇಹಿತರಾಗಿದ್ದರು. ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ತಾರಕಕ್ಕೇರಿ ಯುವಕನಿಗೆ ಚಾಕು ಇರಿತ ಮಾಡಲಾಗಿದೆ.
ಆಸೀಫ್ ಅವರ ಎದೆ, ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ಈ ಬಗ್ಗೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



- Advertisement -








