Thursday, October 8, 2026
spot_imgspot_img
spot_imgspot_img

ನವರಾತ್ರಿ, ದೀಪಾವಳಿ ಹಬ್ಬದ ಹೊತ್ತಲ್ಲಿ ಸಿಹಿತಿಂಡಿಗಳ ಮೇಲೆ ಕಣ್ಣಿಟ್ಟ ಎಫ್‌ಎಸ್‌ಎಸ್‌ಎಐ

- Advertisement -
- Advertisement -

ನವದೆಹಲಿ: ಹಬ್ಬದ ಸಂಭ್ರಮದಲ್ಲಿ ಆಹಾರ ಕಲಬೆರಕೆ ತಡೆಗಟ್ಟಲು ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಎಲ್ಲಾ ರಾಜ್ಯಗಳಿಗೆ ಮಹತ್ವದ ಸೂಚನೆ ನೀಡಿದೆ.

ನವರಾತ್ರಿ ಮತ್ತು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಿಹಿತಿಂಡಿ, ಹಾಲು ಮತ್ತು ಹಾಲಿನ ಉತ್ಪನ್ನಗಳು, ಖಾದ್ಯ ತೈಲ, ಪಾನೀಯ, ನಮ್ಕೀನ್, ಪಾಪಡ್ ಸೇರಿದಂತೆ ವಿವಿಧ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಈ ಸಂದರ್ಭದಲ್ಲಿ ಕಲಬೆರಕೆ, ನಕಲಿ ಮತ್ತು ಅಸುರಕ್ಷಿತ ಆಹಾರ ಉತ್ಪನ್ನಗಳ ಮಾರಾಟ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪ್ರಾಧಿಕಾರ ತಿಳಿಸಿದೆ.

ಹಬ್ಬದ ಅವಧಿಯಲ್ಲಿ ತಪಾಸಣೆಯನ್ನು ಹೆಚ್ಚಿಸಬೇಕು, ಮಾದರಿ ಸಂಗ್ರಹವನ್ನು ಹೆಚ್ಚಿಸಬೇಕು ಮತ್ತು ಫುಡ್ ಸೇಫ್ಟಿ ಆನ್ ವೀಲ್ಸ್ ವಾಹನಗಳನ್ನು ಪ್ರಮುಖ ಮಾರುಕಟ್ಟೆಗಳಲ್ಲಿ ನಿಯೋಜಿಸಿ ಸ್ಥಳದಲ್ಲೇ ಆಹಾರ ಪರೀಕ್ಷೆ ನಡೆಸಬೇಕು ಎಂದು ಸೂಚಿಸಲಾಗಿದೆ.

ಅಲ್ಲದೆ, ಹಾಟ್‌ಸ್ಪಾಟ್ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ತಪಾಸಣೆಗೆ ಒತ್ತು ನೀಡಬೇಕು. ಕಲಬೆರಕೆ ಆಹಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಮತ್ತು ಆಹಾರ ತಪಾಸಣೆ, ಸ್ಯಾಂಪಲ್ ಸಂಗ್ರಹಣೆ ಹಾಗೂ ಫಲಿತಾಂಶದ ಮಾಹಿತಿಯನ್ನು FoSCoS / FoSCoRIS ನಲ್ಲಿ ರಿಯಲ್ ಟೈಮ್‌ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು ಎಂದು ರಾಜ್ಯಗಳ ಎಫ್‌ಡಿಎ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಹಬ್ಬದ ಸಮಯದಲ್ಲಿ ಜನರಿಗೆ ಸುರಕ್ಷಿತ ಮತ್ತು ಗುಣಮಟ್ಟದ ಆಹಾರ ದೊರೆಯುವಂತೆ ಮಾಡಲು ಈ ಸೂಚನೆಯನ್ನು ಪರಿಗಣಿಸುವಂತೆ ಎಫ್ಎಸ್ಎಸ್ಎಐ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!