Sunday, June 14, 2026
spot_imgspot_img
spot_imgspot_img

ಪುತ್ತೂರು: (ಆ7-15) ಜಿ.ಎಲ್.ಆಚಾರ್ಯ ಜ್ಯುವೆಲ್ಲರ್‍ಸ್‌ನಲ್ಲಿ “ಆಟಿ ಸೇಲ್”; ಚಿನ್ನಾಭರಣಗಳ ಪ್ರತೀ ಗ್ರಾಂ ಮೇಲೆ 100ರೂ. ರಿಯಾಯಿತಿ

- Advertisement -
- Advertisement -

ಪುತ್ತೂರು: ಪ್ರತಿ ವರ್ಷದಂತೆ ಈ ಬಾರಿಯೂ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್‍ಸ್‌ನ ಪುತ್ತೂರು ಹಾಗೂ ಸುಳ್ಯ ಚಿನ್ನಾಭರಣ ಮಳಿಗೆಗಳಲ್ಲಿ ಆಗಸ್ಟ್ 7ರಿಂದ 15ರವರೆಗೆ “ಆಟಿ ಸೇಲ್” ಆಯೋಜಿಸಲಾಗಿದೆ. ಆಟಿ ಸೇಲ್‌’ನ ಕೊಡುಗೆಯಾಗಿ ಚಿನ್ನಾಭರಣಗಳ ಪ್ರತೀ ಗ್ರಾಂ ಮೇಲೆ ರೂ.100 ರಿಯಾಯಿತಿ, ವಜ್ರಾಭರಣಗಳ ಪ್ರತೀ ಕ್ಯಾರಟ್ ಮೇಲೆ ರೂ.5,000ದವರೆಗೆ ರಿಯಾಯಿತಿ, ಬೆಳ್ಳಿಯ ಆಭರಣಗಳ ಮೇಲೆ ಪ್ರತಿ ಕಿಲೋ ಗ್ರಾಂಗೆ ರೂ.2,000 ರಿಯಾಯಿತಿ ಇದೆ.

ಸ್ವರ್ಣೋದ್ಯಮದಲ್ಲಿ 65 ವರ್ಷಗಳಿಂದ ಜನಮನ ಗೆದ್ದು, ಚಿನ್ನಾಭರಣಪ್ರಿಯರ ಮನೆಮಾತಾಗಿ ಕರಾವಳಿ, ಮಲೆನಾಡುಗಳಲ್ಲಿ ವಿಶಿಷ್ಟ ಛಾಪು ಮೂಡಿಸಿ, 6,000 ಚದರಡಿ ಬಹುಮಹಡಿ ಮಳಿಗೆಯಲ್ಲಿ ಝಗಮಗಿಸುವ ಜಿ.ಎಲ್‌ ಆಚಾರ್ಯ ಜ್ಯುವೆಲ್ಲರ್‍ಸ್‌ನಲ್ಲಿ ವಿನೂತನ ಶೈಲಿಯ ಚಿನ್ನಾಭರಣಗಳ ಶ್ರೇಣಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಸಾವಿರಾರು ಹೊಸ ಹೊಸ ಬಗೆಯ ವಿನ್ಯಾಸದ ನೆಕ್ಲೇಸ್‌ಗಳು, ಪ್ರಾಚಿ ಎಂಬ ಹೆಸರಿನ ಆಂಟಿಕ್ ಆಭರಣಗಳು, ವಜ್ರಾಭರಣಗಳು, ಮಕ್ಕಳ, ಮಹಿಳೆಯರ ಹಾಗೂ ಪುರುಷರ ನಾನಾ ಅಭಿರುಚಿಗೆ ಒಪ್ಪುವ ಆಭರಣಗಳ ಅಪೂರ್ವ ಸಂಗ್ರಹ ಇಲ್ಲಿದೆ.

ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಲಿಫ್ಟ್ ಜತೆಗೆ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ, ಸಂಪೂರ್ಣ ಪಾರದರ್ಶಕ ವ್ಯವಹಾರ, ನ್ಯಾಯೋಚಿತ ತಯಾರಿಕಾ ವೆಚ್ಚ ಜಿ.ಎಲ್.ಆಚಾರ್ಯ ಜುವೆಲ್ಲರ್‌ನ ವೈಶಿಷ್ಟ್ಯ.ಎಲ್ಲಾ ಪೀಳಿಗೆಯ ಅಭಿರುಚಿಗೆ ತಕ್ಕಂತೆ ಚಿನ್ನದ ಆಭರಣಗಳ ವಿಶಿಷ್ಟ ಕಲೆಕ್ಷನ್ ಇಲ್ಲಿದೆ. ಗ್ರಾಹಕರಿಗೆ ತಮ್ಮ ಮನದಿಚ್ಛೆಯ ಆಭರಣಗಳ ಆರಾಮದಾಯಕ ಆಯ್ಕೆಗಾಗಿ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳಿಗೆ ಪ್ರತ್ಯೇಕ ವಿಭಾಗಗಳಿವೆ. ಗ್ರಾಹಕರ ಅನುಕೂಲಕ್ಕಾಗಿ ಪುತ್ತೂರು ಮಳಿಗೆ ಭಾನುವಾರಗಳಂದು ಕೂಡಾ ತೆರೆದಿರುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!