Monday, April 29, 2024
spot_imgspot_img
spot_imgspot_img

ಪುತ್ತೂರು: ಗ್ಯಾರೇಜ್‌ನ ಬೀಗ ಮುರಿದು ಕಳವು

- Advertisement -G L Acharya panikkar
- Advertisement -

ಪುತ್ತೂರು: ಗ್ಯಾರೇಜ್‌ನ ಬೀಗ ಮುರಿದು ಅಂದಾಜು ರೂ 69,800 ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಪುತ್ತೂರು ಇರ್ದೆ ಜಂಕ್ಷನಲ್ಲಿ ಗುರುವಾರ ರಾತ್ರಿ ನಡೆದಿದೆ.

ಪ್ರಸಾದ ಎಂಬವರು, ಪುತ್ತೂರು ಇರ್ದೆ ಜಂಕ್ಷನಲ್ಲಿ ಗ್ಯಾರೇಜ್ ನಡೆಸುತ್ತಿದ್ದು, ದಿನಾಂಕ 18/01/2024ರಂದು ಸಂಜೆ ಗ್ಯಾರೇಜ್ ಗೆ ಬೀಗ ಹಾಕಿ ಮನೆಗೆ ಹೋಗಿರುತ್ತಾರೆ. ತಡರಾತ್ರಿ ಸಮಯ ಗ್ಯಾರೇಜ್ ಬಾಗಿಲು ತೆರೆದಿರುವ ಬಗ್ಗೆ ಪ್ರಸಾದರವರಿಗೆ ಮಾಹಿತಿ ಬಂದ ಮೇರೆಗೆ, ಕೂಡಲೇ ಬಂದು ನೋಡಿದಾಗ, ಗ್ಯಾರೇಜ್ ನ ಬೀಗ ಮುರಿದು ಬಾಗಿಲು ತೆರೆದಿದ್ದು, ಒಳಗೆ ಹೋಗಿ ನೋಡಲಾಗಿ ಅಂದಾಜು ರೂ 69,800 ಮೌಲ್ಯದ ಸೊತ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿರುವುದು ಕಂಡುಬಂದಿರುತ್ತದೆ. ಘಟನೆ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 15-2024 ಕಲಂ: IPC 1860 (U/s-457, 380) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!