Saturday, June 6, 2026
spot_imgspot_img
spot_imgspot_img

ಗ್ಯಾಸ್​ ಸಿಲಿಂಡರ್​​ ಬ್ಲಾಸ್ಟ್​​.. ಒಂದೇ ಕುಟುಂಬದ ಐವರ ಸ್ಥಿತಿ ಗಂಭೀರ!

- Advertisement -
- Advertisement -

ಗ್ಯಾಸ್ ಸಿಲಿಂಡರ್ ಲೀಕ್ ಆಗಿ ಸ್ಫೋಟಗೊಂಡ ಘಟನೆ ಬೆಳಗಾವಿ ನಗರದ ಬಸವನ ಗಲ್ಲಿಯಲ್ಲಿ ನಡೆದಿದೆ. ಒಂದೇ ಕುಟುಂಬದ ಐವರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಲಲಿತಾ ಭಟ್ (48), ಮೋಹನ್ ಭಟ್(56), ಕಮಲಾಕ್ಷಿ ಭಟ್(80), ಹೇಮಂತ್ ಭಟ್(27), ಗೋಪಿಕೃಷ್ಣ ಭಟ್(84) ಗಂಭೀರವಾಗಿ ಗಾಯಗೊಂಡವರು. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಖಡೇಬಜಾರ್ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!