Wednesday, July 22, 2026
spot_imgspot_img
spot_imgspot_img

ಸಿಲಿಂಡ‌ರ್ ರೀಫಿಲ್‌ ಬುಕಿಂಗ್ ಅವಧಿ ಹೆಚ್ಚಳವಾಗಿಲ್ಲ: ನೋಂದಣಿಗಳ ನಡುವಿನ ಅವಧಿ ನಗರ ಪ್ರದೇಶಗಳಿಗೆ 25 ದಿನಗಳು ಮತ್ತು ಗ್ರಾಮೀಣ ಪ್ರದೇಶಗಳಿಗೆ 45 ದಿನಗಳು ಎಂಬ ನಿಯಮ ಮುಂದುವರಿಯಲಿದೆ -ಪೆಟ್ರೋಲಿಯಮ್ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

- Advertisement -
- Advertisement -

ಹೊಸದಿಲ್ಲಿ: ಗೃಹ ಬಳಕೆಯ 14.2 ಕೆಜಿ ಸಿಲಿಂಡರ್‌ಗಳ ಮರುಭರ್ತಿ ನೋಂದಣಿಗಳ ನಡುವಿನ ಅವಧಿಯನ್ನು 25 ದಿನಗಳಿಂದ 35 ದಿನಗಳಿಗೆ ಹೆಚ್ಚಿಸಲಾಗಿದೆ ಎಂಬ ವರದಿಗಳನ್ನು ಪೆಟ್ರೋಲಿಯಮ್ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಳ್ಳಿಹಾಕಿದೆ. ಎಲ್‌ಪಿಜಿ ಮರುಭರ್ತಿ ನೋಂದಣಿ ನಿಯಮಾವಳಿಗಳಲ್ಲಿ ಬದಲಾವಣೆಯಾಗಿದೆ ಎಂಬುದಾಗಿ ಮಾಧ್ಯಮಗಳ ಒಂದು ವರ್ಗದಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿಯು ಸತ್ಯವಲ್ಲ ಎಂದು ಅಧಿಕೃತ ಸ್ಪಷ್ಟಿಕರಣವೊಂದರಲ್ಲಿ ಸಚಿವಾಲಯ ತಿಳಿಸಿದೆ. ಹಾಲಿ ನಿಯಮಾವಳಿಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಅದು ಹೇಳಿದೆ.ಅಡುಗೆ ಅನಿಲ ಸಿಲಿಂಡರ್‌ಗಳ ಎರಡು ಮರುಭರ್ತಿ ನೋಂದಣಿಗಳ ನಡುವಿನ ಕನಿಷ್ಠ ಅವಧಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಅದು ಹೇಳಿದೆ. ಎರಡು ಮರುಭರ್ತಿ ನೋಂದಣಿಗಳ ನಡುವಿನ ಅವಧಿಯು ನಗರ ಪ್ರದೇಶಗಳಿಗೆ 25 ದಿನಗಳು ಮತ್ತು ಗ್ರಾಮೀಣ ಪ್ರದೇಶಗಳಿಗೆ 45 ದಿನಗಳು ಎಂಬ ನಿಯಮವು ಮುಂದುವರಿಯುತ್ತದೆ ಎಂದು ಸಚಿವಾಲಯ ತಿಳಿಸಿದೆ.

- Advertisement -

Related news

error: Content is protected !!