
ಹೊಸದಿಲ್ಲಿ ಎ.28: ಮೇ 1ರಿಂದ ಎಲ್‌ಪಿಜಿ ಸಿಲಿಂಡರ್ ಬುಕಿಂಗ್ ನಿಯಮಗಳು ಬದಲಾಗುವ ಸಾಧ್ಯತೆಯಿದೆ. ಹೊಸ ನಿಯಮಗಳು ಬುಕಿಂಗ್ ನಡುವೆ ಸುದೀರ್ಘ ಅಂತರ, ಕಡ್ಡಾಯ ಒಟಿಪಿ ಆಧಾರಿತ ಪೂರೈಕೆ, ಕಠಿಣ ಇಕೆವೈಸಿ ಅಗತ್ಯಗಳನ್ನು ಒಳಗೊಂಡಿರಬಹುದು.
ಜೊತೆಗೆ ಎಲ್ ಪಿ ಜಿ ಬೆಲೆ ಏರಿಕೆಯ ಸಾಧ್ಯತೆಯೂ ಇದೆ. ಈ ಬದಲಾವಣೆಗಳು ಸಿಲಿಂಡರ್‌ಗಳ ವಿತರಣೆಯನ್ನು ಸುಧಾರಿಸುವ ಮತ್ತು ದುರುಪಯೋಗವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆಯಾದರೂ ದೈನಂದಿನ ಬಳಕೆದಾರರ ಮೇಲೆ ಪರಿಣಾಮವನ್ನೂ ಬೀರಬಹುದು.
ಎಲ್‌ಪಿಜಿ ಸಿಲಿಂಡರ್ ನಿಯಮಗಳು ಚರ್ಚಿತ ವಿಷಯವಾಗುತ್ತಿದ್ದು ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಅಥವಾ ಬುಕಿಂಗ್ಗಳಲ್ಲಿ ವಿಳಂಬಗಳನ್ನು ತಪ್ಪಿಸಲು ಗ್ರಾಹಕರು ಹೊಸ ವ್ಯವಸ್ಥೆಯನ್ನು ಮುಂಚಿತವಾಗಿಯೇ ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ.ಬುಕಿಂಗ್‌ಗಳ ನಡುವೆ ಅಂತರನಗರ ಪ್ರದೇಶಗಳಲ್ಲಿ ಎರಡು ಬುಕಿಂಗ್‌ಗಳ ನಡುವಿನ ಅಂತರವು 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಗಳಲ್ಲಿ 45 ದಿನಗಳಿಗೆ ವಿಸ್ತರಣೆಗೊಳ್ಳಬಹುದು. ಅಂದರೆ ಕುಟುಂಬಗಳು ಅನಿಲ ಬಳಕೆಯನ್ನು ಹೆಚ್ಚು ಎಚ್ಚರಿಕೆಯಿಂದ ಯೋಜಿಸಬೇಕಾಗುತ್ತದೆ.ಒಟಿಪಿ ಆಧಾರಿತ ವಿತರಣೆ ಮುಂದುವರಿಕೆಮೇ 1ರಿಂದ ನೂತನ ಎಲ್‌ಪಿಜಿ ಸಿಲಿಂಡರ್ ನಿಯಮಗಳಡಿ ಒಟಿಪಿ ಆಧಾರಿತ ವಿತರಣೆಯು ಇನ್ನಷ್ಟು ಕಟ್ಟುನಿಟ್ಟುಗೊಳ್ಳುವ ನಿರೀಕ್ಷೆಯಿದೆ.ಗ್ರಾಹಕರು ಸಿಲಿಂಡರ್ ಸ್ವೀಕರಿಸುವ ಸಮಯದಲ್ಲಿ ತಮ್ಮ ಮೊಬೈಲ್‌ಗೆ ಬಂದಿರುವ ಒಟಿಪಿಯನ್ನು ವಿತರಣಾ ಸಿಬ್ಬಂದಿಯೊಂದಿಗೆ ಹಂಚಿಕೊಳ್ಳುವುದು ಕಡ್ಡಾಯವಾಗಿದೆ.
ಇದು ಸರಿಯಾದ ವ್ಯಕ್ತಿಗೆ ಸಿಲಿಂಡರ್ ವಿತರಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಮತ್ತು ವಂಚನೆಯನ್ನು ತಗ್ಗಿಸುವ ಉದ್ದೇಶವನ್ನು ಹೊಂದಿದೆ.ಇ-ಕೆವೈಸಿ ಪ್ರಕ್ರಿಯೆನೂತನ ನಿಯಮಗಳು ಆಧಾರ್-ಆಧಾರಿತ ಇ-ಕೆವೈಸಿಗೆ ಹೆಚ್ಚಿನ ಒತ್ತು ನೀಡಲಿವೆ.ಗ್ರಾಹಕರು, ವಿಶೇಷವಾಗಿ ಸರಕಾರಿ ಯೋಜನೆಗಳಡಿ ಫಲಾನುಭವಿಗಳು ಎಲ್‌ಪಿಜಿ ಸೇವೆಗಳು ಮತ್ತು ಸಬ್ಸಿಡಿಗಳನ್ನು ಪಡೆಯುವುದನ್ನು ಮುಂದುವರಿಸಲು ಇ-ಕೆವೈಸಿಯನ್ನು ಪೂರ್ಣಗೊಳಿಸಬೇಕಾಗಬಹುದು.ವಿಫಲಗೊಂಡರೆ ಪೂರೈಕೆಯಲ್ಲಿ ಅಡಚಣೆಗಳನ್ನು ಎದುರಿಸಬೇಕಾಗಬಹುದು.
ಎಲ್‌ಪಿಜಿ ಬೆಲೆ ಏರಿಕೆ ಸಾಧ್ಯತೆನಿಯಮ ಬದಲಾವಣೆಗಳ ಜೊತೆ ಸಂಭಾವ್ಯ ಎಲ್‌ಪಿಜಿ ಬೆಲೆ ಏರಿಕೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ.ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳಲ್ಲಿ ಈಗಾಗಲೇ ಸುಮಾರು 60 ರೂ.ಗಳಷ್ಟು ಏರಿಕೆಯಾಗಿದೆ. ಪೂರೈಕೆ ಪರಿಸ್ಥಿತಿಗಳನ್ನು ಅವಲಂಬಿಸಿ ಬೆಲೆಗಳಲ್ಲಿ ಇನ್ನಷ್ಟು ಪರಿಷ್ಕರಣೆಗಳು ಆಗಬಹುದು. ಜಾಗತಿಕ ಅಂಶಗಳು ಮತ್ತು ಪೂರೈಕೆ ಸಮಸ್ಯೆಗಳೂ ಈ ಬದಲಾವಣೆಗಳಲ್ಲಿ ಪಾತ್ರ ಹೊಂದಿವೆ.ಪಿಎನ್‌ಜಿಗೆ ಬದಲಾವಣೆಪೈಪ್ ನೈಸರ್ಗಿಕ ಅನಿಲ (ಪಿಎಸ್ಟಿ) ಪೂರೈಕೆಗೆ ಕ್ರಮೇಣ ಒತ್ತು ನೀಡಲಾಗುತ್ತಿದೆ. ಪಿಎನ್‌ಜಿ ಲಭ್ಯವಿರುವ ಪ್ರದೇಶಗಳಲ್ಲಿ ಅದರ ಬಳಕೆಗೆ ಗ್ರಾಹಕರನ್ನು ಉತ್ತೇಜಿಸಬಹುದು ಅಥವಾ ಕ್ರಮೇಣ ಅದಕ್ಕೆ ಬದಲಿಸಿಕೊಳ್ಳುವುದು ಅಗತ್ಯವಾಗಬಹುದು. ಕೆಲವು ಸಂದರ್ಭಗಳಲ್ಲಿ ಪಿಎನ್‌ಜಿಗೆ ಬದಲಿಸಿಕೊಳ್ಳುವಲ್ಲಿ ವೈಫಲ್ಯವು ಭವಿಷ್ಯದಲ್ಲಿ ಎಲ್‌ಪಿಜಿ ಪೂರೈಕೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು.
ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡುವುದು ಹೇಗೆ?
ಬದಲಾವಣೆಗಳ ಹೊರತಾಗಿಯೂ ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡುವುದು ಸರಳ ಪ್ರಕ್ರಿಯೆಯಾಗಿಯೇ ಮುಂದುವರಿಯಲಿದೆ. ಗ್ರಾಹಕರು ವಾಟ್ಸ್ಆ್ಯಪ್, ಎಸ್‌ಎಂಎಸ್, ಮಿಸ್ಟ್ ಕಾಲ್, ಐವಿಆರ್ಎಸ್ ಅಥವಾ ಅಧಿಕೃತ ಮೊಬೈಲ್ ಆ್ಯಪ್ತಳು ಮತ್ತು ವೆಬೈಟ್‌ಗಳಂತಹ ಹಲವಾರು ಬುಕಿಂಗ್ ಪದ್ಧತಿಗಳನ್ನು ಬಳಸಬಹುದು.ಗ್ರಾಹಕರು ಸಮಸ್ಯೆಗಳನ್ನು ನಿವಾರಿಸಲು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗಳನ್ನು ಬಳಸಿ ಬುಕಿಂಗ್ ಮಾಡುವುದು ಅತ್ಯಗತ್ಯ..








