Monday, May 6, 2024
spot_imgspot_img
spot_imgspot_img

ವಿಟ್ಲ: (ಡಿ.3) ಬಂಟ್ವಾಳ ತಾ. ಗೌಡರ ಯುವ ವೇದಿಕೆ, ವಿಟ್ಲ ಇವರ ನೇತೃತ್ವದಲ್ಲಿ ತಾಲೂಕು ಮಟ್ಟದ ಗೌಡರ ಕ್ರೀಡೋತ್ಸವ

- Advertisement -G L Acharya panikkar
- Advertisement -

ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯುವ ವೇದಿಕೆ, ವಿಟ್ಲ ಇದರ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ (ರಿ) ಮತ್ತು ಮಹಿಳಾ ಘಟಕ ಶಾಂತಿನಗರ ವಿಟ್ಲ ಬಂಟ್ವಾಳ ತಾಲೂಕು ದ.ಕ ಇದರ ಸಹಯೋಗದೊಂದಿಗೆ ತಾಲೂಕು ಮಟ್ಟದ ಗೌಡರ ಕ್ರೀಡೋತ್ಸವವು ಡಿ. 3 ಆದಿತ್ಯವಾರ ಬೆಳಿಗ್ಗೆ 9:30 ಕ್ಕೆ ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣ ,ವಿಟ್ಲದಲ್ಲಿ ನಡೆಯಲಿದೆ.

ಪಂದ್ಯಾಟದಲ್ಲಿ ಪುರುಷರಿಗೆ ಕಬಡ್ಡಿ, ಹಗ್ಗಜಗ್ಗಾಟ, ವಾಲಿಬಾಲ್, ಗುಂಡು ಎಸೆತ, ಹಿರಿಯರಿಗೆ ಲಕ್ಕಿ ಗೇಮ್, ವೇಗದ ನಡಿಗೆ (ಮಹಿಳೆ ಮತ್ತು ಪುರಷರು 50 ವರ್ಷ ಮೇಲ್ಪಟ್ಟು), ಮಹಿಳೆಯರಿಗೆ ತ್ರೋಬಾಲ್ , ಗುಂಡುಎಸೆತ, ಸಂಗೀತ ಕುರ್ಚಿ, ಲಕ್ಕಿ ಗೇಮ್, ಹಗ್ಗ- ಜಗ್ಗಾಟ, ಬಾಲಕ-ಬಾಲಕಿಯರಿಗೆ (5ನೇ ತರಗತಿ ವರೆಗೆ) 100 ಮೀ. ಓಟ, ಸಂಗೀತ ಕುರ್ಚಿ ಹಾಗೂ ಲಕ್ಕಿ ಗೇಮ್, ಬಾಲಕ- ಬಾಲಕಿಯರಿಗೆ( 6-10ನೇ ತರಗತಿ ವರೆಗೆ) 100 ಮೀ. ಓಟ, ಸಂಗೀತ ಕುರ್ಚಿ, ಲಕ್ಕಿ ಗೇಮ್ ಹಾಗೂ ಕಬಡ್ಡಿ( ಕಬಡ್ಡಿ 10ನೇ ತರಗತಿ ವರೆಗಿನ ಬಾಲಕರಿಗೆ ಮಾತ್ರ) ನಡೆಯಲಿದೆ.

- Advertisement -

Related news

error: Content is protected !!