Monday, June 30, 2025
spot_imgspot_img
spot_imgspot_img

ಗೌಸಿಯ ಯಾಂಗ್ ಮೆನ್ಸ್ ಪಾಟ್ರಕೋಡಿ ನೂತನ ಅಧ್ಯಕ್ಷರಾಗಿ ಕೆ. ಪಿ ನಿಶಾದ್ ಆಯ್ಕೆ

- Advertisement -
- Advertisement -

ವಿಟ್ಲ: ಗೌಸಿಯ ಯಾಂಗ್ ಮೆನ್ಸ್ ಪಾಟ್ರಕೋಡಿ ನೂತನ ಅಧ್ಯಕ್ಷರಾಗಿ ಕೆ. ಪಿ ನಿಶಾದ್ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿ ನೌಷದ್ ಕೋಡಿ ಕೋಶಾಧಿಕಾರಿ ಅರ್ಶಾದ್ ಪಿ, ಉಪಾಧ್ಯಕ್ಷ ಅಶೀಕ್ ಪಾಟ್ರಕೊಡಿ, ಜೊತೆ ಕಾರ್ಯದರ್ಶಿ ಶಾಫಿ ಬಾಯಬೆ, ಲೆಕ್ಕ ಪರಿಶೋಧಕ ತಾಜುದೀನ್ ಬಾಯಬೆ, ಅಜೀಂ ಬಾಯಬೆ, ಸಂಘಟನಾ ಕಾರ್ಯದರ್ಶಿ ಝುಬೈರ್ ಪಾಟ್ರಕೊಡಿ ಹಾಗೂ 20 ಸದಸ್ಯರ ನೂತನ ಸಮಿತಿಯನ್ನು ಆಯ್ಕೆಮಾಡಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಟ್ರಕೊಡಿ ಜಮಾಹತ್ ಅಧ್ಯಕ್ಷರಾದ ಇಸುಬ್ ಕೆ. ಎಸ್. ವಹಿಸಿದರು. ಮಹಮ್ಮದ್ ಮಾಸ್ತರ್, ಜಮಾಹತ್ ಕಾರ್ಯದರ್ಶಿ ಬಾತೀಷ ಬಾಯಬೆರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಪಾಟ್ರಕೊಡಿ ಜಮಾಹತ್ ಖತೀಬ್ ಶರೀಪ್ ಅಝ್ಹರಿ ಉಸ್ತಾದ್ ರವರ ದುವಾದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಅಶ್ರಪ್ ಪಿ. ಕೆ. ಸ್ವಾಗತಿಸಿದರು.

- Advertisement -

Related news

error: Content is protected !!