Friday, April 26, 2024
spot_imgspot_img
spot_imgspot_img

SLV ಬುಕ್ ಹೌಸ್ ನ 6 ನೇ ಮಳಿಗೆ ಮಂಗಳೂರಿನ ಮಾರ್ನೆಮಿಕಟ್ಟೆಯಲ್ಲಿ ಶುಭಾರಂಭ

- Advertisement -G L Acharya panikkar
- Advertisement -

ವಿಟ್ಲ:ಇಡ್ಕಿದು ಗ್ರಾಮದ ಕೋಲ್ಪೆ ದಿ. ರಾಮಾದಾಸ್ ಹಾಗೂ ಸುಂದರಿ ರಾಮದಾಸ್ ರವರ ಪುತ್ರ ದಿವಾಕರದಾಸ್ ನೇರ್ಲಾಜೆ ರವರ ಮಾಲಕತ್ವದ ರಾಜ್ಯದ ಹೆಸರಾಂತ ಎಸ್‌ಎಲ್‌ವಿ ಬುಕ್ಸ್ ಇಂಡಿಯಾ ಪ್ರೈ ಲಿ. ನ ಅಧೀನ ಸಂಸ್ಥೆಯಾದ  ಎಸ್‌ಎಲ್‌ವಿ ಬುಕ್ ಹೌಸ್ ನ ಆರನೇ ಶಾಖಾ ಮಳಿಗೆ ಮಂಗಳೂರಿನ ಮಾರ್ನಮಿಕಟ್ಟೆಯಲ್ಲಿ ಮಾ. 27 ರಂದು ಶುಭಾರಂಭಗೊಂಡಿತು.

ಸಂಸ್ಥೆಯ ಮಾಲಕ ದಿವಾಕರ ದಾಸ್ ರವರ ಗುರುಗಳಾದ ಭವಾನಿ ಟೀಚರ್ ಕೊಲ್ಯರವರು ಸಂಸ್ಥೆಯನ್ನು ರಿಬ್ಬನ್ ಕಟ್ಟ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ ಕಷ್ಟದ ಜೀವನದಲ್ಲಿ ವಿದ್ಯಾಬ್ಯಾಸ ಮಾಡಿ ಮೇಲಕ್ಕೆ ಬಂದ ವ್ಯಕ್ತಿ ದಿವಾಕರ ದಾಸ್. ಕಲಿತ ಶಾಲೆಯ ಉಳಿವಿಗೆ ಪರ್ಯತ್ನಿಸುತ್ತಿರುವ ಧೀಮಂತ ವ್ಯಕ್ತಿ ಅವರು, ಬಡವರಿಗಾಗಿ ಮಿಡಿಯುವ ಹೃದಯ ಅವರದ್ದು, ಯಾರೇ ಕಷ್ಟದಲ್ಲಿದ್ದರೂ ಅವರಿಗೆ ಸಹಾಯಮಾಡುವ ಅವರ ಗುಣ ಎಲ್ಲರೂ ಮೆಚ್ಚುವಂತದ್ದು. ಸಂಸ್ಥೆ ಬೆಳೆಯುವುದರೊಂದಿಗೆ  ಊರಿನ ಹೆಸರೂ ಇನ್ನಷ್ಟು ಎತ್ತರಕ್ಕೆ ಏರಲಿ. ಗುರು ಹಿರಿಯರ‌ ಮೇಲಿರುವ ಭಕ್ತಿ‌ ಅವರ ಯಶಸ್ಸಿನ ಗುಟ್ಟು. ಎಲ್ಲರಿಗೂ ಅವರು  ಮಾದರಿಯಾಗಲಿ. ಸಂಸ್ಥೆ ಇನ್ನಷ್ಟು ಬೆಳಗಲಿ ಎಂದು ಶುಭಹಾರೈಸಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ವೆಂಕಟ್ರಮಣ ಅಸ್ರಣ್ಣ,  ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್,  ಸಂಸ್ಥೆಯ ಹಿತೈಶಿ ವನಿತಾ ಭಟ್, ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು, ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುರೇಶ್ ಕೆ.ಎಸ್. ಮುಕ್ಕುಡ ,
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ,  ಶಾರದಾ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಸುನಿತಾ ಮಡಿ, ಮಾಣಿಲ ಗ್ರಾ.ಪಂ. ಉಪಾಧ್ಯಕ್ಷ  ರಾಜೇಶ್ ಬಾಳೆಕಲ್ಲು, ಬೆಂಗಳೂರಿನ ಸಿನ್ವಿ ಬುಕ್ ಹೌಸ್ ನ ಮಾಲಕ ಚಂದ್ರಕಾಂತ್ ಬೆಂಗಳೂರು, ರಘುರಾಮ್ ದಾಸ್, ನಿವೃತ್ತ ಅಬಕಾರಿ ಇಲಾಖೆಯ ಸಿಬ್ಬಂದಿ ಜಗದೀಶ್ ಶೆಟ್ಟಿ, ನವಚೇತನ ಚಿಟ್ ಫಂಡ್ ನ ನಿರ್ದೇಶಕರಾದ ಲೊಕೇಶ್ ಶೆಟ್ಟಿ, ಉಪಸ್ಥಿತರಿದ್ದರು
.

ಶಿರ್ವ ವಿದ್ಯಾವರ್ದಕ ವಿದ್ಯಾಸಂಸ್ಥೆಯ ಟ್ರಸ್ಟಿ ಜಗದೀಶ್ ಅರಸ, ಇಂಜಿನಿಯರ್ ರಮೇಶ್ ಭಟ್ ಮಿತ್ತೂರು, ಪ್ರಪುಲ್ಲಚಂದ್ರ ಪಿ.ಜಿ. ಕೋಲ್ಪೆ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ರವಿಪ್ರಕಾಶ್ ವಿಟ್ಲ, ದಯಾನಂದ ಶೆಟ್ಟಿ ಉಜಿರೆಮಾರ್, ವಸಂತ ಪೂಜಾರಿ, ಚಂದ್ರನಾಥ್ ಮೈಸೂರು, ದಾರವಾಹಿ ನಿರ್ದೇಶಕ ವಿನು ಬಳಂಜ,  ಅತ್ತಾವರ ಕಾರ್ಪರೇಟರ್ ಶೈಲೇಶ್ ಶೆಟ್ಟಿ,  ಮೀರಾಕೇಶವ ದಾಸ್, ಸುರೇಶ್ ದಾಸ್ ನೆರ್ಲಾಜೆ, ರಾಜೀವಿ ಸುರೇಶ್ ದಾಸ್, ಹಿರಿಯರಾದ ರಘುರಾಮ್ ದಾಸ್,   ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ದಿವಾಕರ ದಾಸ್ ನೆರ್ಲಾಜೆ ಹಾಗೂ ಅವರ ಪತ್ನಿ ಹೇಮಾವತಿ ದಿವಾಕರ ದಾಸ್ ಅತಿಥಿಗಳನ್ನು ಸ್ವಾಗತಿಸಿದರು. ವಿಟಿವಿ ನಿರ್ದೇಶಕ ರಾಮ್ ದಾಸ್ ಶೆಟ್ಟಿ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ಎಲ್ಲೆಡೆ ಜನರಿಂದ ಉತ್ತಮ ಸಹಕಾರ ಸಿಕ್ಕಿದೆ: ದಿವಾಕರ ದಾಸ್ ಮಾಲಕರು ಎಸ್.ಎಲ್.ವಿ. ಗ್ರೂಪ್ಸ್

ರಾಜ್ಯದ ಪ್ರಸಿದ್ಧ ಪಬ್ಲಿಕೇಶನ್ ಸಂಸ್ಥೆಗಳು ಪ್ರಕಟಿಸುವ ಎಲ್ಲಾ ರೀತಿಯ ಪಠ್ಯ ಮತ್ತು ಪಠ್ಯೇತರ ಪುಸ್ತಕಗಳು ಮತ್ತು ಸ್ಟೇಷನರಿ ಐಟಂಗಳನ್ನು ರಾಜ್ಯದಾದ್ಯಂತ ಎಸ್‌ಎಲ್‌ವಿ ಬುಕ್ ಏಜೆನ್ಸೀಸ್ ವಿತರಿಸುತ್ತಿದೆ. ಎಸ್‌ಎಲ್‌ವಿ ಬುಕ್ಸ್ ಇಂಡಿಯಾ ಪ್ರೈ. ಲಿ. ನ ಅಧೀನ ಸಂಸ್ಥೆಗಳಲ್ಲಿ ಎಸ್‌ಎಲ್‌ವಿ ಬುಕ್ ಏಜೆನ್ಸೀಸ್, ಎಸ್‌ಎಲ್‌ವಿ ಬುಕ್ ಹೌಸ್ ಔಟ್‌ಲೆಟ್, ತನ್ನದೇ ಆದ ‘ವೈಟ್ ಸ್ಪೇಸ್’ ನೋಟ್ ಬುಕ್  ವಿತರಿಸುತ್ತಿದೆ. ರಾಜ್ಯದಲ್ಲಿ ಸಂಸ್ಥೆಯ ಆರನೇ ಶಾಖೆ ಇದಾಗಿದ್ದು, ಮಂಗಳೂರಿನಲ್ಲಿ ಇದು ಮೂರನೇ ಶಾಖೆಯಾಗಿದೆ.

ಮುಂದಿನ ದಿನಗಳಲ್ಲಿ ಮೈಸೂರು ಹಾಗೂ ಬೆಂಗಳೂರಿನಲ್ಲಿ ಏಳು ಹಾಗೂ ಎಂಟನೇ ಶಾಖೆ ಶುಭಾರಂಭಗೊಳ್ಳಲಿದ್ದು ಕೆಲಸ ಕಾರ್ಯಗಳು ಪ್ರಗತಿಯಲ್ಲಿದೆ. ಕೇವಲ‌ ಲಾಭದ ಉದ್ದೇಶವನ್ನು ಇಟ್ಟುಕೊಂಡು ಈ ವ್ಯವಹಾರವನ್ನು‌ ಮಾಡುತ್ತಿಲ್ಲ.‌ ನನ್ನಿಂದಾಗಿ ಒಂದಷ್ಟು ಮಂದಿಗೆ ಕೆಲಸ ಸಿಗುತ್ತದೆ ಒಂದಷ್ಟು ಮಂದಿಯ ಸಂಸಾರಕ್ಕೆ ಆಸರೆಯಾಗುವ ಉದ್ದೇಶವಾಗಿದೆ. ಕೇವಲ ಮೂರು ಮಂದಿಯೊಂದಿಗೆ ಆರಂಭವಾದ ಈ ಸಂಸ್ಥೆಯಲ್ಲಿ ಇದೀಗ ೨೦೦ಕ್ಕಿಂತಲೂ ಅಧಿಕ ಸಿಬ್ಬಂದಿಗಳಿದ್ದಾರೆ. ಇದೀಗಾಗಲೇ ಸಂಸ್ಥೆ ಹನ್ನೊಂದನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಎಲ್ಲಾ ಕಡೆಗಳಲ್ಲಿಯೂ ಜನರಿಂದ ನಮ್ಮ ಸಂಸ್ಥೆಗೆ ಸಹಕಾರ ಸಿಕ್ಕಿದೆ. ಇನ್ನು ಮುಂದೆಯೂ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.

- Advertisement -

Related news

error: Content is protected !!