Monday, May 6, 2024
spot_imgspot_img
spot_imgspot_img

ದೇಗುಲದಲ್ಲಿ ಬಟ್ಟೆ ಬಿಚ್ಚಿ ಓಡಾಡಿದ ಜರ್ಮನ್ ಮಹಿಳೆ..! ಪೊಲೀಸ್ ತನಿಖೆಯಲ್ಲಿ ಅಸಲಿಯತ್ತು ಬಹಿರಂಗ

- Advertisement -G L Acharya panikkar
- Advertisement -

ದೇಗುಲವೊಂದರಲ್ಲಿ ಪ್ರವಾಸಿ ಮಹಿಳೆ ಸಂಪೂರ್ಣ ನಗ್ನಳಾಗಿ ಆವಾಂತರ ಸೃಷ್ಟಿಸಿದ ಘಟನೆ ನಡೆದಿದೆ. ಇಂಡೋನೇಷ್ಯಾದ ಬಾಲಿಯ ದೇವಸ್ಥಾನವೊಂದರಲ್ಲಿ ಜರ್ಮನಿಯ ಮಹಿಳೆ ಈ ರೀತಿ ಮಾಡಿ ಪೊಲೀಸರ ಅತಿಥಿಯಾಗಿದ್ದಾಳೆ. ಮಾಧ್ಯಮ ವರದಿಗಳ ಪ್ರಕಾರ, ಬಾಲಿಯ ಈ ದೇವಾಲಯದಲ್ಲಿ ಬೆತ್ತಲೆಯಾದ ನಂತರ, ವಿಚಿತ್ರವಾಗಿ ವರ್ತಿಸಿ ಗಲಾಟೆ ಮಾಡಿದ್ದಳು ಎನ್ನಲಾಗಿದೆ.

ಈಕೆಯ ವಿಚಿತ್ರ ನಡವಳಿಕೆಯಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಟ್ಟೆ ಬಿಚ್ಚಿದ ಬಳಿಕ ಮಹಿಳೆ ಅಲ್ಲಿ ಇಲ್ಲಿ ಸುತ್ತಾಡುತ್ತಾ ದೇವಸ್ಥಾನದಲ್ಲಿದ್ದ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾಳೆ. ದೇವಸ್ಥಾನದ ಆಡಳಿತ ಮಂಡಳಿ ತುರ್ತು ಸೇವೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪವಿತ್ರ ಸ್ಥಳದಲ್ಲಿ ಗಲಾಟೆ :
28 ವರ್ಷದ ಈ ಜರ್ಮನ್ ಯುವತಿಯ ಹೆಸರು ದರ್ಜಾ. ದೇವಸ್ಥಾನದಲ್ಲಿ ಏಕಾಏಕಿ ನಗ್ನಳಾದ ಮೇಲೆ ಅಲ್ಲಿದ್ದವರಿಗೆ ಆಕೆ ಯಾಕೆ ಹೀಗೆ ಮಾಡಿದಳು ಎಂದು ತಿಳಿದುಬಂದಿಲ್ಲ. ಸುದ್ದಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ, ಬಾಲಿ ದೇವಸ್ಥಾನದಲ್ಲಿ ಬೆತ್ತಲೆಯಾಗಿ ಮತ್ತು ಪವಿತ್ರ ಸ್ಥಳದಲ್ಲಿ ಗಲಾಟೆ ಮಾಡಿದ್ದಕ್ಕಾಗಿ ಆಕೆಯನ್ನು ಬಂಧಿಸಿದ್ದಾರೆ.

ಮಾನಸಿಕ ಆಸ್ಪತ್ರೆಗೆ ದಾಖಲು
ಪೊಲೀಸರ ವಿಚಾರಣೆಯಲ್ಲಿ ಆಕೆ ಮಾನಸಿಕ ಸ್ಥಿತಿ ಸರಿಯಿಲ್ಲ ಎಂಬುವುದು ತಿಳಿದುಬಂದಿದೆ. ಇಂಡೋನೇಷ್ಯಾದ ಅಧಿಕಾರಿಗಳು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರೋಟೋಕಾಲ್ ಅನ್ನು ಅನುಸರಿಸಿ, ಚಿಕಿತ್ಸೆಗಾಗಿ ಮಾನಸಿಕ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆಕೆ ತಂಗಿದ್ದ ಹೋಟೆಲ್‌ನಲ್ಲಿ ಬಟ್ಟೆ ಇಲ್ಲದೆ ತಿರುಗಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಮಹಿಳೆ ಕೋಪಗೊಂಡಿದ್ದಳು ಮತ್ತು ದುಃಖದ ಸ್ಥಿತಿಯಲ್ಲಿದ್ದಳು. ಇನ್ನು ಕೆಲವು ದಿನ ಇಲ್ಲೇ ಇರಲು ಬಯಸುತ್ತಿರುವಾಗಲೇ ಮನೆಯಿಂದ ತಂದಿದ್ದ ಹಣವೆಲ್ಲ ಮುಗಿದಿದೆ ಎಂದು ಹೇಳಿದ್ದಾಳೆ.

ದೇವಾಲಯದ ಶುದ್ಧೀಕರಣ :
ಈ ಘಟನೆಯ ನಂತರ ಅರ್ಚಕರು ದೇವಾಲಯವನ್ನು ಶುದ್ಧೀಕರಿಸಿದ್ದಾರೆ. ಇಂಡೋನೇಷ್ಯಾದ ವಿದೇಶಾಂಗ ಇಲಾಖೆಯ ಪ್ರಕಾರ, ಬಾಲಿಯಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಪ್ರಕರಣಗಳು ಸ್ವಲ್ಪ ಸಮಯದದಿಂದ ಹೆಚ್ಚಾಗಿದೆ. ಕುಡಿದ ಮತ್ತಿನಲ್ಲಿ ಗಲಾಟೆ ಸೃಷ್ಟಿಸಿದ ಅಥವಾ ಧಾರ್ಮಿಕ ಸ್ಥಳಗಳ ಘನತೆಯೊಂದಿಗೆ ಆಟವಾಡಿದ ಅಥವಾ ಅಶ್ಲೀಲತೆಯನ್ನು ಹರಡಿದ ಆರೋಪದ ಮೇಲೆ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ವಿದೇಶಿ ಪ್ರವಾಸಿಗರನ್ನು ದೇಶದಿಂದ ಹೊರಹಾಕಲಾಗುತ್ತಿದೆ.

- Advertisement -

Related news

error: Content is protected !!