Saturday, May 18, 2024
spot_imgspot_img
spot_imgspot_img

ಕಾಶ್ಮೀರಿ ನಾಯಕರೊಂದಿಗೆ ಪ್ರಧಾನಿ ಮೋದಿ ಸರ್ವಪಕ್ಷ ಸಭೆ; 5 ಬೇಡಿಕೆಗಳನ್ನ ಮುಂದಿಟ್ಟ ಕಾಂಗ್ರೆಸ್

- Advertisement -G L Acharya panikkar
- Advertisement -

ನವದೆಹಲಿ: ಕಾಶ್ಮೀರಿ ನಾಯಕರ ಜೊತೆಗಿನ ಪ್ರಧಾನಿ ಮೋದಿ ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ಕೇಂದ್ರ ಸರ್ಕಾರದ ಎದುರು 5 ಬೇಡಿಕೆಗಳನ್ನು ಇಟ್ಟಿದೆ.

ಸಭೆಯ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ತಾವು 5 ಬೇಡಿಕೆಗಳನ್ನು ಇಟ್ಟಿರುವುದಾಗಿ ಹೇಳಿದ್ದಾರೆ.

ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ನ 5 ಬೇಡಿಕೆಗಳು..

1. ಜಮ್ಮು ಕಾಶ್ಮೀರಕ್ಕೆ ರಾಜ್ಯತ್ವ ನೀಡಬೇಕು. ಅವುಗಳನ್ನ ರಾಜ್ಯಗಳನ್ನಾಗಿ ಪರಿಗಣಿಸಬೇಕು.

2. ಜಮ್ಮು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನ ಮರುಸ್ಥಾಪಿಸಲು ವಿಧಾನಸಭಾ ಚುನಾವಣೆಗಳನ್ನ ನಡೆಸಬೇಕು.

3. ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರನ್ನ ಮರಳಿ ಕರೆಸಬೇಕು ಹಾಗೂ ಅವರಿಗೆ ಪುನರ್ವಸತಿ ಕಲ್ಪಿಸಬೇಕು.

4. ಜಮ್ಮು ಮತ್ತು ಕಾಶ್ಮೀರದಲ್ಲಿ 370 ಯನ್ನು ನಿಷ್ಕ್ರಿಯಗೊಳಿಸಿದ ನಂತರ ಬಂಧಿತರಾಗಿರುವ ಎಲ್ಲ ರಾಜಕೀಯ ಮುಖಂಡರನ್ನೂ ಬಿಡುಗಡೆಗೊಳಿಸಬೇಕು.

5. ಜಮ್ಮು ಮತ್ತು ಕಾಶ್ಮೀರದ ನಿವಾಸ ಕಾನೂನುಗಳನ್ನು ಮರುಸ್ಥಾಪಿಸಬೇಕು.

- Advertisement -

Related news

error: Content is protected !!