- Advertisement -
- Advertisement -
ಮುಂಬೈ: ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿದ್ದ ಯುವತಿಯೊಬ್ಬಳು ಮನೆ ಮಾಲಿಕನ 15 ವರ್ಷದ ಮಗನ ಮೇಲೆ ಅತ್ಯಾಚಾರ ಎಸಗಿದ್ದಾಳೆ ಎಂದು ಆರೋಪಿಸಲಾಗಿದೆ.

ಮುಂಬೈನ ಗೋರೆಗಾಂವ್ ನಲ್ಲಿ ಈ ಪ್ರಕರಣ ವರದಿಯಾಗಿದೆ. ನವೆಂಬರ್ ನಲ್ಲಿ ಮನೆ ತೊರೆಯುವ ಮುನ್ನ ಯುವತಿ ಈ ಕೃತ್ಯ ಎಸಗಿದ್ದಾಳೆ ಎಂದು ಆರೋಪಿಸಲಾಗಿದೆ. ಯುವತಿ ಪರ ವಕೀಲರು ಈ ಆರೋಪ ತಳ್ಳಿಹಾಕಿದ್ದಾರೆ. ಬಾಡಿಗೆ ವಿವಾದ ಸಂಬಂಧ ಈ ಆರೋಪ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮೊದಲು ಬಾಲಕನ ಜತೆ ಸ್ನೇಹಿತಳಂತೆ ವರ್ತಿಸಿದ್ದ ಯುವತಿ ಬಳಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ಆರು ತಿಂಗಳು ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿದ್ದ ವೇಳೆ ಯುವತಿ ಈ ರೀತಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದೀಗ ಯುವತಿಯನ್ನು ಬಂಧಿಸಲಾಗಿದೆ.




- Advertisement -








