Tuesday, June 23, 2026
spot_imgspot_img
spot_imgspot_img

ಪ್ರಿಯಕರನನ್ನು ಕೆಲಸದಿಂದ ವಜಾಗೊಳಿಸಿದ ಫ್ಯಾಕ್ಟರಿಗೆ ಬೆಂಕಿ ಹಚ್ಚಲು ಯತ್ನಿಸಿದ ಪ್ರಿಯತಮೆ

- Advertisement -
- Advertisement -

ರಾಜ್‌ಕೋಟ್(ಗುಜರಾತ್): ತನ್ನ ಬಾಯ್ ಫ್ರೆಂಡ್ ನನ್ನು ಕೆಲಸದಿಂದ ತೆಗೆದ ಸಿಟ್ಟಿನಿಂದ ಆತನ ಗೆಳತಿ ಫ್ಯಾಕ್ಟರಿಗೆ ಬೆಂಕಿ ಹಚ್ಚಲು ಮುಂದಾಗಿದ್ದಾಳೆ.

ಗುಜರಾತ್‌ನ ಗಾಂಧಿ ಧಾಮದ 24 ವರ್ಷದ ಯುವತಿ ಮಾಯಾಬೆನ್ ಪರ್ಮಾರ್ ಕಾರ್ಖಾನೆಗೆ ಬೆಂಕಿ ಹಚ್ಚಲು ಮುಂದಾದ ಯುವತಿ ಎಂದು ಆರೋಪಿಸಲಾಗಿದೆ.

ಗಣೇಶನಗರ ಪ್ರದೇಶದ ನಿವಾಸಿ ಮಾಯಾಬೆನ್ ಪರ್ಮಾರ್ ಬಳಸಿದ ಬಟ್ಟೆಗಳನ್ನು ಮರುಬಳಕೆ ಮಾಡುವ ಕಂಪನಿ ಕೆನಮ್ ಇಂಟರ್ನ್ಯಾಷನಲ್ ಕಾರ್ಖಾನೆಗೆ ಬೆಂಕಿ ಇಡುವ ಯತ್ನ ಮಾಡಿದ್ದಾಳೆ. ಬಟ್ಟೆಯಿಂದ ಸಿದ್ಧಮಾಡಿಕೊಂಡಿದ್ದ ಸೂಡಿಯನ್ನು ಬಳಸಿ ಬೆಂಕಿ ಹಚ್ಚಲು ಮುಂದಾಗಿದ್ದಾಳೆ.

ಪೊಲೀಸರು ಯುವತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿ ಮಾಯಾಬದನ್ ಪರ್ಮಾರ್ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ‌.

- Advertisement -

Related news

error: Content is protected !!