Sunday, April 28, 2024
spot_imgspot_img
spot_imgspot_img

ಕಾರ್ಕಳ: olx ನಲ್ಲಿ ಬೈಕ್‌ ಖರೀದಿಸಲು ಹೋಗಿ ಲಕ್ಷಾಂತರ ರೂ. ಕಳೆದುಕೊಂಡ ಯುವಕ

- Advertisement -G L Acharya panikkar
- Advertisement -

ಕಾರ್ಕಳ : ಬೈಕ್‌ ಖರೀದಿಸಲು olx ಮೋರೆ ಹೋದ ಯುವಕನೊಬ್ಬ ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಕಾರ್ಕಳದಲ್ಲಿ ನಡೆದಿದೆ.

ಇರ್ಫಾನ್ (27) ಎಂಬಾತ ಮೋಸ ಹೋದವನು.

ಇವರು ಬೈಕ್‌ ಖರೀದಿ ಮಾಡಲು ಸಾಮಾಜಿಕ ಜಾಲತಾಣವಾದ olx ನಲ್ಲಿ ಹುಡುಕಾಟ ನಡೆಸುತ್ತಿರುವ ಸಮಯ ಅದರಲ್ಲಿ ಸಿಕ್ಕಿದ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿದ್ದು, ಬೈಕ್ ಬಗ್ಗೆ ಮಾಹಿತಿ ಕೇಳಿದಾಗ ಆ ವ್ಯಕ್ತಿ ತಾನು ಇಂಡಿಯನ್ ಆರ್ಮಿಯಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ತಾನು ಬೈಕ್ ಮಾರಾಟ ಮಾಡುತ್ತೇನೆ ಎಂದು ಹೇಳಿ ಬೈಕಿನ ಫೋಟೋ ಮತ್ತುವಿವರವನ್ನು ಇರ್ಫಾನ್ ನ ವಾಟ್ಸಾಪ್‌ಗೆ ಕಳುಯಹಿಸಿರುತ್ತಾನೆ.ವಾಟ್ಸಾಪ್‌ನಲ್ಲಿ ಬಂದ ಬೈಕ್‌ನ ಫೋಟೋ ಗಮನಿಸಿದ ಇರ್ಫಾನ್ ಬೈಕ್ ಖರೀದಿಸುವ ಕುರಿತು ಮಾತುಕತೆ ನಡೆಸಿ, ಒಪ್ಪಿಗೆ ಸೂಚಿಸಿದ್ದಾರೆ.

ಆ ವ್ಯಕ್ತಿಯು ಆತನ ಬ್ಯಾಂಕ್ ನ ಖಾತೆ ನೀಡಿ ಸದರಿ ಖಾತೆಗೆ ಹಣ ಜಮಾವಣೆ ಮಾಡಿದರೆ ಸಾಯಂಕಾಲದ ಒಳಗಾಗಿ ಬೈಕನ್ನು ನಿಮ್ಮ ಮನೆಗೆ ಮುಟ್ಟಿಸುವುದಾಗಿ ಇರ್ಫಾನ್ ಗೆ ಮನದಟ್ಟು ಮಾಡಿದ್ದಾನೆ.ಅದರಂತೆ ಆತನು ತಿಳಿಸಿದ ಬ್ಯಾಂಕ್ ಖಾತೆಗೆ ಇರ್ಫಾನ್ ಹಂತ ಹಂತವಾಗಿ ಒಟ್ಟು ರೂ. 1,18,139 ಹಣವನ್ನು ವರ್ಗಾಯಿಸಿದರೂ ಇರ್ಫಾನ್‌ಗೆ ಇದುವರೆಗೂ ಬೈಕನ್ನು ನೀಡದೆ ಹಣವನ್ನು ವಾಪಾಸು ಖಾತೆಗೆ ಜಮಾ ಮಾಡದೇ ಮೋಸ ಮಾಡಿರುವುದಾಗಿ ತಿಳಿದುಬಂದಿದೆ. ಇರ್ಪಾನ್ ನೀಡಿರುವ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ

- Advertisement -

Related news

error: Content is protected !!