Saturday, April 20, 2024
spot_imgspot_img
spot_imgspot_img

ಸರಕಾರದ ಸೌಲಭ್ಯಗಳನ್ನು ಜನರ ಬಳಿ ಕೊಂಡೊಯ್ಯುವ ಕಾರ್ಯವಾಗಬೇಕು – ಶಾಸಕ ಕಾಮತ್.

- Advertisement -G L Acharya panikkar
- Advertisement -

ಮಂಗಳೂರು: ಭಾರತೀಯ ಜನತಾ ಪಾರ್ಟಿ ಕೊಡಿಯಾಲ್ ಬೈಲ್ ವಾರ್ಡ್, ಎಸ್.ಸಿ ಮೋರ್ಚಾ ಹಾಗೂ ಯುವಮೋರ್ಚಾ ಮಂಗಳೂರು ನಗರ ದಕ್ಷಿಣ ಮಂಡಲ ಇದರ ಜಂಟಿ ಆಶ್ರಯದಲ್ಲಿ ಮಂಗಳೂರು ಒನ್ ಸಹಯೋಗದೊಂದಿಗೆ ಆಯುಷ್ಮಾನ್ ಭಾರತ್ ಹಾಗೂ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮವು ವಿವೇಕನಗರದಲ್ಲಿ ಜರಗಿತು.

ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು ಈ ದೇಶದ ಬಡ ಜನರಿಗಾಗಿ ತಂದಿರುವ ಆಯುಷ್ಮಾನ್ ಭಾರತ್ ಕಾರ್ಡ್ ದೇಶದ ಕಟ್ಟ‌ಕಡೆಯ ನಾಗರಿಕರಿಗೂ ತಲುಪುವಂತೆ ಮಾಡುವ ಅನನ್ಯವಾದ ಜವಬ್ದಾರಿ ನಮ್ಮ ಕಾರ್ಯಕರ್ತರ ಮೇಲಿದೆ. ಯೋಜನೆಯಿಂದ ಅದೆಷ್ಟೋ ಜನರು ಲಾಭ ಪಡೆಯುತ್ತಿದ್ದಾರೆ. ಆದರೆ ಪ್ರತಿಯೊಬ್ಬ ಬಡವರಿಗೂ ಕೂಡ ಇದರ ಲಾಭ ದೊರೆಯುವಂತೆ ನಾವೆಲ್ಲರೂ ಕಾರ್ಯೋನ್ಮುಖರಾಗಬೇಕು ಎಂದರು.

ಕೊಡಿಯಾಲ್ ಬೈಲ್ ವಾರ್ಡಿನ ಕಾರ್ಯಕರ್ತರ ಇಂದಿನ ಕಾರ್ಯ ಶ್ಲಾಘನೀಯ. ಪ್ರಮುಖವಾಗಿ ಸರಕಾರ ನೀಡುವ ಯೋಜನೆಗಳನ್ನು ಜನರ ಬಳಿಗೆ ತಲುಪಿಸುವ ಕಾರ್ಯ ಇನ್ನಷ್ಟು ಆಗಬೇಕು ಎಂದು ಶಾಸಕ ಕಾಮತ್ ಹೇಳಿದರು.

ಮೇಯರ್ ದಿವಾಕರ್ ಪಾಂಡೇಶ್ವರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡಿಯಾಲ್ ಬೈಲ್ ವಾರ್ಡಿನ ಮನಪಾ ಸದಸ್ಯರಾದ ಸುಧೀರ್ ಶೆಟ್ಟಿ, ಬಿಜೆಪಿ ಮಂಗಳೂರು ನಗರ ದಕ್ಷಿಣ ಅದ್ಯಕ್ಷ ವಿಜಯ ಕುಮಾರ್ ಶೆಟ್ಟಿ, ಮನಪಾ ಸದಸ್ಯರಾದ ಕದ್ರಿ ಮನೋಹರ್ ಶೆಟ್ಟಿ,ಲೀಲಾವತಿ ಪ್ರಕಾಶ್, ಮಾಜಿ ಸಚಿವರಾದ ಕೃಷ್ಣ ಜೆ ಪಾಲೆಮಾರ್, ಎಸ್.ಸಿ ಮೋರ್ಚಾ ಅದ್ಯಕ್ಷ ರಘುವೀರ್ ಬಾಬುಗುಡ್ಡೆ, ಯುವಮೋರ್ಚಾ ಅದ್ಯಕ್ಷ ಸಚಿನ್ ರಾಜ್ ಗೋಪಾಲ್ ರೈ, ಬಿಜೆಪಿ ಮುಖಂಡರಾದ ಪ್ರಶಾಂತ್ ಆಳ್ವ,ಜಯರಾಜ್ ಶೆಟಿಟಿ, ಮೇಘರಾಜ್ ಬಲ್ಲಾಳ್ ಭಾಗ್, ಉದ್ಯಮಿ ಗಣೇಶ್ ಶೆಟ್ಟಿ,ಸತ್ಯಸಾರಮಾಣಿ ದೈವಸ್ಥಾನದ ಅದ್ಯಕ್ಷರಾದ ಅಜಿತ್ ಕುಮಾರ್ ಉಪಸ್ಥಿತರಿದ್ದರು.

- Advertisement -

Related news

error: Content is protected !!