Friday, March 29, 2024
spot_imgspot_img
spot_imgspot_img

ಒಂದು ವರ್ಷದೊಳಗೆ ದೇಶಾದ್ಯಂತ ಜಿಪಿಎಸ್‌ ಆಧಾರಿತ ಟೋಲ್‌‌ ಸಂಗ್ರಹ ವ್ಯವಸ್ಥೆ ಅಳವಡಿಕೆ – ನಿತಿನ್‌ ಗಡ್ಕರಿ

- Advertisement -G L Acharya panikkar
- Advertisement -

ನವದೆಹಲಿ: ದೇಶಾದ್ಯಂತ ಒಂದು ವರ್ಷದೊಳಗೆ ಜಿಪಿಎಸ್‌ ಆಧಾರಿತ ಟೋಲ್‌‌ ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತನ್ ಗಡ್ಕರಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೋತ್ತರ ಸಂದರ್ಭ ಈ ಬಗ್ಗೆ ತಿಳಿಸಿದ ಅವರು, ಒಂದು ವರ್ಷದೊಳಗೆ ದೇಶಾದ್ಯಂತ ಇರುವ ಟೋಲ್‌ ಪ್ಲಾಜಾಗಳನ್ನು ತೆಗೆದುಹಾಕಿ, ಜಿಪಿಎಸ್‌ ಆಧಾರಿತ ಟೋಲ್‌ ಸಂಗ್ರಹದ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತರಲಿದೆ. ವಾಹನಗಳ ಮೇಲಿರುವ ಜಿಪಿಎಸ್‌ ಚಿತ್ರ ಆಧರಿಸಿ ಟೋಲ್‌‌‌ ಸಂಗ್ರಹ ಮಾಡಲಾಗುವುದು ಎಂದಿದ್ದಾರೆ.

ಪ್ರಸ್ತುತ ಶೇ.93ರಷ್ಟು ವಾಹನಗಳು ಫಾಸ್ಟ್‌ಟ್ಯಾಗ್‌ ಮೂಲಕವೇ ಟೋಲ್‌ ಪಾವತಿ ಮಾಡುತ್ತಿವೆ. ಉಳಿದಂತೆ ಶೇ.7ರಷ್ಟು ಜನ ದುಪ್ಪಟ್ಟು ಟೋಲ್‌ ಶುಲ್ಕ ಪಾವತಿ ಮಾಡುತ್ತಿದ್ದಾರೆ. ಆದರೆ, ಅವರು ಫಾಸ್ಟ್‌‌ಟ್ಯಾಗ್‌ ಅಳವಡಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.

ಫಾಸ್ಟ್‌‌ಟ್ಯಾಗ್‌ ಉಪಯೋಗಿಸಿ ಟೋಲ್‌ ಪಾವತಿ ಮಾಡದ ವಾಹನಗಳ ಬಗ್ಗೆ ತನಿಖೆ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಅನ್ನು ಅಳವಡಿಸಿಕೊಳ್ಳದೇ, ಟೋಲ್‌‌‌ ಪಾವತಿಯಿಂದ ತಪ್ಪಿಸಿಕೊಳ್ಳುತ್ತಿರುವ ಹಾಗೂ ಜಿಎಸ್‌‌ಟಿಯನ್ನು ಕೂಡಾ ಪಾವತಿ ಮಾಡದೇ ಇರುವ ಪ್ರಕರಣಗಳು ಕೂಡಾ ಇವೆ” ಎಂದು ಹೇಳಿದ್ದಾರೆ.

- Advertisement -

Related news

error: Content is protected !!