Monday, June 15, 2026
spot_imgspot_img
spot_imgspot_img

ವಿಟ್ಲ ಮೂಡ್ನೂರು ಗ್ರಾಮ ಪಂಚಾಯತ್ ಚುನಾವಣೆ- ಬಿಜೆಪಿ ಅಭಿನಂದನಾ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ವಿಟ್ಲಮುಡ್ನೂರು ಶಕ್ತಿ ಕೇಂದ್ರದ ವತಿಯಿಂದ ವಿಟ್ಲಮುಡ್ನೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜಯಶಾಲಿಯಾದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ, ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಅಭಿನಂದನಾ ಕಾರ್ಯಕ್ರಮವು ಜ.31ರಂದು ಕುಂಡಡ್ಕ ಶೆಡ್ಡು ಸೊಸೈಟಿ ವಠಾರದಲ್ಲಿ ನಡೆಯಿತು.

ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅಥಿತಿಗಳಾಗಿ ಮಾಜಿ ಶಾಸಕರಾದ ಮಲ್ಲಿಕಾ ಪ್ರಸಾದ್, ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಕರುಣಾಕರ ನಾಯಿತೊಟ್ಟು, ದಯಾನಂದ ಶೆಟ್ಟಿ ಉಜಿರೆಮಾರ್, ಜಿಲ್ಲಾ ಪಂಚಾಯತ್ ಸದಸ್ಯರು ಶಯನಾ ಜಯಾನಂದ್ ಉಪ್ಪಿನಂಗಡಿ, ವನಜಾಕ್ಷಿ ಭಟ್, ರಮೇಶ್ ಭಟ್ ಮಿತ್ತೂರು, ಅರುಣ್ ವಿಟ್ಲ, ಶ್ರೀಕೃಷ್ಣ ವಿಟ್ಲ ಉಪಸ್ಥಿತರಿದ್ದರು.

ವಿಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಮಹಾಬಲೇಶ್ವರ ಭಟ್, ಪುನೀತ್ ಮಾಡ್ತಾರ್, ಉಮೇಶ್ ಗೌಡ, ಪ್ರೇಮಲತಾ, ರೋಹಿಣಿ, ಚಂದ್ರಾವತಿ, ಲೋಕೇಶ್, ಜಯಪ್ರಕಾಶ್ ನಾಯಕ್, ಭಾರತಿ, ಕುಳ ಗ್ರಾಮ ಪಂಚಾಯತ್ ನ ಸದಸ್ಯರಾದ ಪ್ರಶಾಂತ್ ಶೆಟ್ಟಿ, ಹರಿಣಾಕ್ಷಿ, ಯಶೋಧ ಕಂಪ ರವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ವಿಠಲ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿದರು. ಗೋವಿಂದರಾಜ್ ಸ್ವಾಗತಿಸಿ, ಪದ್ಮನಾಭ ಚಪ್ಪುಡಿಯಡ್ಕ ವಂದಿಸಿದರು.

- Advertisement -

Related news

error: Content is protected !!