- Advertisement -
- Advertisement -




ಕಡಬ: ನೆಲ್ಯಾಡಿಯ ಕಾಮಧೇನು ಮಹಿಳಾ ಸಹಕಾರ ಸಂಘ ಹಾಗೂ ಒಡಿಯೂರು ವಿವಿದ್ದೋದ್ದೇಶ ಸೌಹಾರ್ದ ಸಹಕಾರ ಸಂಘದ ಉಪ್ಪಿನಂಗಡಿ ಶಾಖೆಯಲ್ಲಿ ನಕಲಿ ಬಳೆಗಳನ್ನು ಅಡವಿಟ್ಟು ಸಾಲಪಡೆದು ವಂಚಿಸಿರುವ ಆರೋಪಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಲಂಕಾರು ಶಾಖೆಯಲ್ಲೂ ನಕಲಿ ಬಳೆಗಳನ್ನು ಅಡವಿಟ್ಟು ವಂಚಿಸಿರುವುದು ಬೆಳಕಿಗೆ ಬಂದಿದೆ.
ವಂಚಕರಾದ ನೆಲ್ಯಾಡಿ ಗ್ರಾಮದಾತ ಎನ್ನಲಾಗಿರುವ ಕಡಬ ನಿವಾಸಿ ಸೆಬಾಸ್ಟಿಯನ್ ಮತ್ತು ಕೇರಳ ಮೂಲದ ಡಾನಿಶ್ ಎಂದು ಗುರುತಿಸಲಾಗಿದೆ.
ನೆಲ್ಯಾಡಿ, ಕಡಬ, ಉಪ್ಪಿನಂಗಡಿಯಲ್ಲಿ ನಕಲಿ ಚಿನ್ನವಿಟ್ಟು ಸಾಲಪಡೆದು ಸಹಕಾರಿ ಸಂಘಗಳಿಗೆ ವಂಚಕರು ಲಕ್ಷಗಟ್ಟಲೆ ಪಂಗನಾಮ ಮಾಡಿದ್ದಾರೆ. ನೆಲ್ಯಾಡಿಯ ಕಾಮಧೇನು ಸಂಘದಲ್ಲಿ ನಕಲಿ ಚಿನ್ನದ ಬಳೆಗಳನ್ನು ಇಟ್ಟು 1.40 ಲಕ್ಷ ಸಾಲ ಪಡೆದಿದ್ದಾರೆ.ಉಪ್ಪಿನಂಗಡಿಯ ಒಡಿಯೂರು ಸಹಕಾರಿ ಸಂಘದಲ್ಲಿ 1.70 ಲಕ್ಷ ಸಾಲ, ಕಡಬದ ಅಲಂಕಾರು ಒಕ್ಕಲಿಗ ಸಹಕಾರಿ ಸಂಘಗಳಲ್ಲೂ ನಕಲಿ ಚಿನ್ನ ಅಡವಿಟ್ಟು 1.35 ಲಕ್ಷ ಸಾಲ ಪಡೆದು ವಂಚಿಸಿದ್ದಾರೆ.
- Advertisement -








