Monday, May 20, 2024
spot_imgspot_img
spot_imgspot_img

ವಿಟ್ಲ: ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ನಂ. ಎಫ್. ಎಫ್.94, ಇದರ 2023-24 ನೇ ಸಾಲಿನ ಕಾರ್ಯ ಸಾಧನೆಯ ಬಗ್ಗೆ ಪತ್ರಿಕಾಗೋಷ್ಠಿ

- Advertisement -G L Acharya panikkar
- Advertisement -
This image has an empty alt attribute; its file name is creative2-1024x1024.jpeg

ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ನಂ. ಎಫ್. ಎಫ್.94, ಇದರ 2023-24 ನೇ ಸಾಲಿನ ಸಾಧನೆಯ ಕುರಿತಾದ ಪತ್ರಿಕಾಗೋಷ್ಠಿ ಬ್ಯಾಂಕ್‌ನ ಸಭಾಭವನದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಕ್ಷೇತ್ರ ವೀಶೆಷ ಕಾರ್ಯಸಾಧನೆಗೆ ಹೆಸರುವಾಸಿಯಾದ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ತನ್ನ ಕಾರ್ಯಸಾಧನೆಯ ಮೂಲಕ ಸದಸ್ಯ ಬಾಂಧವರ ಮನಸ್ಸಿನಲ್ಲಿ ಅಚ್ಚಳಿಯದಂತೆ ಛಾಪು ಮೂಡಿಸುತ್ತಾ ಬಂದಿದ್ದು, 2023-24 ನೇ ಸಾಲಿನ ಅರ್ಥಿಕ ವರ್ಷದಲ್ಲಿ ತನ್ನ ಗರಿಷ್ಠ ಕಾರ್ಯದಕ್ಷತೆಯನ್ನು ಮೆರೆದು ರೂ 2.97ಕೋಟಿಗೂ ಮಿಕ್ಕಿ ಲಾಭಗಳಿಸಿ ವಿಶೇಷ ಸಾಧನೆ ಮಾಡಿದೆ.

ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮವನ್ನು ಹೊರತುಪಡಿಸಿ ಜಿಲ್ಲೆಯ ಉಳಿದೆಲ್ಲಾ ತಾಲೂಕಿನ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಬ್ಯಾಂಕ್ ವಿಟ್ಲದಲ್ಲಿ ಪ್ರಧಾನ ಕಛೇರಿ ಮತ್ತು ಕನ್ಯಾನ, ಕಲ್ಲಡ್ಕ, ಬಿ.ಸಿ.ರೋಡ್ ಹಾಗೂ ಪುತ್ತೂರಿನಲ್ಲಿ ಶಾಖೆಗಳನ್ನು ಹೊಂದಿದ್ದು, ಒಟ್ಟು 8025 ಮಂದಿ ಸದಸ್ಯರಿಗೆ ರೂ. 2.61 ಕೋಟಿ ಪಾಲು ಬಂಡವಾಳವನ್ನು ಹೊಂದಿರುತ್ತದೆ.
ವರ್ಷದಲ್ಲಿ ದಾಖಲೆಯ ರೂ.690 ಕೋಟಿಗಳ ವ್ಯವಹಾರವನ್ನು ದಾಖಲಿಸಿದ್ದು ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಈ ಬಾರಿ 75 ಕೋಟಿ ರೂಪಾಯಿ ಹೆಚ್ಚಿನ ವ್ಯವಹಾರವನ್ನು ಮಾಡಿರುತ್ತದೆ. ಠೇವಣಿ ಸಂಗ್ರಹಣೆಯಲ್ಲಿ ತುಂಬ ಸ್ವರ್ಧೆಗಳಿದ್ದರೂ ಬ್ಯಾಂಕ್ ರೂ. 127.19 ಕೋಟಿ ರೂಪಾಯಿಗಳ ಠೇವಣಿ ಸಂಗ್ರಹಿದ್ದು ಕಳೆದ ಸಾಲಿಗಿಂತ 5.83% ರಷ್ಟು ಹೆಚ್ಚಳವಾಗಿರುತ್ತದೆ. ಅಲ್ಲದೆ 83.76 ಕೋಟಿ ರೂಪಾಯಿಗಳ ಹೊರಬಾಕಿ ಸಾಲಗಳಿದ್ದು ಸಾಲ ವಸೂಲಾತಿಯೂ ಕಳೆದ ಸಾಲಿಗಿಂತ ಹೆಚ್ಚಾಗಿದ್ದು ಶೇಕಡಾ 92.27 ಆಗಿರುತ್ತದೆ.

ಪ್ರಸ್ತುತ ಬ್ಯಾಂಕಿನಲ್ಲಿ 8.34 ಕೋಟಿ ರೂಪಾಯಿ ಮೀಸಲು ನಿಧಿಯಿದ್ದು, ರೂ.11.25 ಕೋಟಿಗಳ ಇತರ ನಿಧಿಗಳನ್ನು ಹೊಂದಿದ್ದು ರೂ 2.28 ಕೋಟಿಗಳ ಚರ ಹಾಗೂ ಸ್ಥಿರಾಸ್ತಿಗಳನ್ನು ಹೊಂದಿರುತ್ತದೆ. ಬ್ಯಾಂಕಿನ ದುಡಿಯುವ ಬಂಡವಾಳ ರೂ 152.38 ಕೋಟಿಗಳಾಗಿರುತ್ತದೆ. ಬ್ಯಾಂಕ್ ಹಲವಾರು ವರ್ಷಗಳಿಂದ ಅಡಿಟ್ ವರ್ಗೀಕರಣದಲ್ಲಿ ’ಎ’ ತರಗತಿಯಲ್ಲಿದ್ದು ಶೇಕಡಾ 20 ಡಿವಿಡೆಂಡ್‌ ನೀಡುತ್ತಾ ಬಂದಿರುತ್ತದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಬ್ಯಾಂಕ್ ನಿ ಮಂಗಳೂರು ಇವರಿಂದ, ಸತತವಾಗಿ ಸಾಧನಾ ಪ್ರಶಸ್ತಿಯನ್ನು ಮುಡಿಗೇರಿಸಿಗೊಂಡಿದೆ. ಕಲ್ಲಡ್ಕದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶಾಖಾ ಕಛೇರಿ ಹಾಗೂ ವಾಣಿಜ್ಯ ಕಟ್ಟಡದ ಲೋಕಾರ್ಪಣೆ ಕಾರ್ಯವು ಶೀಘ್ರದಲ್ಲಿ ಜರಗಲಿದೆ.

ಬ್ಯಾಂಕಿನ ಪ್ರಧಾನ ಕಛೇರಿ ಒಟ್ಟು ವ್ಯವಹಾರ ರೂ. 413 ಕೋಟಿಗಳಾಗಿದ್ದು ಠೇವಣಾತಿಯು 73.24 ಕೋಟಿ ರೂಪಾಯಿಗಳಾಗಿರುತ್ತದೆ 33.07 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 91.92 ಆಗಿರುತ್ತದೆ, ಅಂದಾಜು ರೂ 2.40 ಕೋಟಿ ಲಾಭಗಳಿಸಿರುತ್ತದೆ.

ಕನ್ಯಾನ ಶಾಖೆಯಲ್ಲಿ ಒಟ್ಟು ವ್ಯವಹಾರ ರೂ 78.59 ಕೋಟಿಗಳಾಗಿದ್ದು , ಠೇವಣಾತಿಯು , 19.08 ಕೋಟಿ ರೂಪಾಯಿಗಳಾಗಿದೆ. 9.20 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇದ್ದು ವಸೂಲಾತಿಯ ಶೇಕಡಾ 97.02 ಆಗಿರುತ್ತದೆ, ಅಂದಾಜು ರೂ 20.84 ಲಕ್ಷ ಲಾಭಗಳಿಸಿರುತ್ತದೆ.

ಕಲ್ಲಡ್ಕ ಶಾಖೆಯಲ್ಲಿ ಒಟ್ಟು ವ್ಯವಹಾರ ರೂ. 78.20 ಕೋಟಿಗಳಾಗಿದ್ದು, ಠೇವಣಾತಿಯು 16.05 ಕೋಟಿ ರೂಪಾಯಿಗಳಾಗಿರುತ್ತದೆ. 9.47 ಕೋಟಿ ರೂಪಾಯಿಗಳಾಗಿರುತ್ತದೆ. 18.59 ಕೋಟಿ ಹೊರ ಬಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 95.91 ಆಗಿರುತ್ತದೆ. ಅಂದಾಜು ರೂ 3.05ಲಕ್ಷ ಲಾಭಗಳಿಸಿರುತ್ತದೆ.


ಬಿ.ಸಿ.ರೋಡ್ ಶಾಖೆಯಲ್ಲಿ ಒಟ್ಟು ವ್ಯವಹಾರ ರೂ. 44.48 ಕೋಟಿಗಳಾಗಿದ್ದು, ಠೇವಣಾತಿಯು 16.05 ಕೋಟಿ ರೂಪಾಯಿಗಳಾಗಿರುತ್ತದೆ. 8.49 ಕೋಟಿ ರುಪಾಯಿಗಳ ಹೊರ ಬಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 92.21 ಆಗಿರುತ್ತದೆ. ಅಂದಾಜು ರೂ 1.91ಲಕ್ಷ ಲಾಭಗಳಿಸಿರುತ್ತದೆ.

ಪುತ್ತೂರು ಶಾಖೆಯಲ್ಲಿ ಒಟ್ಟು ವ್ಯವಹಾರ ರೂ 75.50 ಕೋಟಿಗಳಾಗಿದ್ದು, ಠೇವಣಾತಿಯು 16.05 ಕೋಟಿ ರೂಪಾಯಿಗಳಾಗಿರುತ್ತದೆ .14.39 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 85.36 ಆಗಿರುತ್ತದೆ, ರೂ 31.34 ಲಕ್ಷ ಲಾಭಗಳಿಸಿರುತ್ತದೆ.

2024-25 ನೇ ಸಾಲಿನಲ್ಲಿ ಬ್ಯಾಂಕ್‌ ರೂ. 750 ಕೋಟಿಗೂ ಮೀರಿದ ವ್ಯವಹಾರವನ್ನು ರೂ. 135 ಕೋಟಿ ಮೇಲ್ಪಟ್ಟು ಠೇವಣಿ ಸಂಗ್ರಹಣೆ ರೂ. 95 ಕೋಟಿಗೂ ಮೀರಿದ ಸಾಲ ನೀಡಿಕೆಯಾಗಿದೆ. ರೂ. 3.25 ಕೋಟಿಗೂ ಮೀರಿದ ಲಾಭವನ್ನು ಹಾಗೂ 96 ರಷ್ಟು ಸಾಲ ವಸೂಲಾತಿ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಬ್ಯಾಂಕ್‌ನಲ್ಲಿ 32 ನುರಿತ ಸಿಬ್ಬಂದಿಗಳಿದ್ದು, ಇವರ ಪೂರ್ಣ ಪ್ರಮಾಣದ ಸಹಕಾರದೊಂದಿಗೆ ಬ್ಯಾಂಕ್‌ ಅಭಿವೃದ್ಧಿಯತ್ತ ಸಾಗುತ್ತಿದೆ ಈ ಬಗ್ಗೆ ಹೆಮ್ಮೆ ಇದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಹೆಚ್‌. ಜಗನ್ನಾಥ ಸಾಲ್ಯಾನ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ಮೋಹನ್‌ ಕೆ ಎಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮುರಳೀ ಶ್ಯಾಮ್‌ ಕೆ, ನಿರ್ದೇಶಕರುಗಳಾದ ಹರೀಶ್‌ ನಾಯಕ್‌, ಮನೋರಂಜನ್‌ ಕೆ ಆರ್‌, ವಿಶ್ವನಾಥ್‌ ಎಮ್‌, ಕೃಷ್ಣ ಕೆ, ಉದಯ್‌ ಕುಮಾರ್‌.ಎ , ಬಾಲಕೃಷ್ಣ ಪಿ ಎಸ್‌, ದಿವಾಕರ್‌ ವಿ, ದಯಾನಂದ ಆಳ್ವ ಕೆ, ಸುಂದರ ಡಿ, ಗೋವರ್ಧನ ಕುಮಾರ್‌ ಐ, ಶ್ರೀಮತಿ ಶುಭಲಕ್ಷ್ಮೀ, ಶ್ರೀಮತಿ ಜಯಂತಿ ಹೆಚ್‌ ರಾವ್‌ ಉಪಸ್ಥಿತರಿದ್ದರು.

- Advertisement -

Related news

error: Content is protected !!