Sunday, May 19, 2024
spot_imgspot_img
spot_imgspot_img

ಜುಲೈನಲ್ಲಿ ₹1.16 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ – ಹಣಕಾಸು ಸಚಿವಾಲಯ

- Advertisement -G L Acharya panikkar
- Advertisement -

ಜುಲೈ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ₹1.16 ಲಕ್ಷ ಕೋಟಿಗೂ ಹೆಚ್ಚು ಮಾಸಿಕ ವರಮಾನ ಸಂಗ್ರಹವಾಗಿದೆ’ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ‘ಕಳೆದ ವರ್ಷ ಇದೇ ತಿಂಗಳು ಸಂಗ್ರಹವಾಗಿದ್ದ ಜಿಎಸ್‌ಟಿ ವರಮಾನಕ್ಕೆ ಹೋಲಿಸದರೆ ಈ ಬಾರಿ ಶೇಕಡ 33 ರಷ್ಟು ಹೆಚ್ಚು ವರಮಾನ ಸಂಗ್ರಹವಾಗಿದೆ. ಈ ಬೆಳವಣಿಗೆಯು ದೇಶದ ಆರ್ಥಿಕತೆಯು ವೇಗವಾಗಿ ಚೇತರಿಸಿಕೊಳ್ಳುತ್ತಿದೆ ಎಂಬುದನ್ನು ತೋರಿಸುತ್ತದೆ’ ಎಂದು ಸಚಿವಾಲಯ ಹೇಳಿದೆ.

ಜುಲೈ,2020ರಲ್ಲಿ ₹87,422 ಕೋಟಿ ಜಿಎಸ್‌ಟಿ ವರಮಾನ ಸಂಗ್ರಹವಾಗಿತ್ತು. ಈ ವರ್ಷ ಜೂನ್‌ ತಿಂಗಳಲ್ಲಿ ₹92,849 ಕೋಟಿ ಜಿಎಸ್‌ಟಿ ಮಾಸಿಕ ವರಮಾನ ಸಂಗ್ರಹವಾದರೆ, ಜುಲೈ ತಿಂಗಳಲ್ಲಿ ₹1,16,393 ಜಿಎಸ್‌ಟಿ ವರಮಾನ ಸಂಗ್ರಹವಾಗಿದೆ. ಇದರಲ್ಲಿ ಕೇಂದ್ರ ಜಿಎಸ್‌ಟಿ ಮೂಲಕ ₹ 22,197 ಕೋಟಿ, ರಾಜ್ಯ ಜಿಎಸ್‌ಟಿ ಮೂಲಕ ₹28,541 ಕೋಟಿ, ಸಮಗ್ರ ಜಿಎಸ್‌ಟಿ ಮೂಲಕ ₹57,864 ಕೋಟಿ ಮತ್ತು ಸೆಸ್‌ ಮೂಲಕ ₹7,790 ಕೋಟಿ ಸಂಗ್ರಹ ಆಗಿದೆ.

driving
- Advertisement -

Related news

error: Content is protected !!