Wednesday, May 8, 2024
spot_imgspot_img
spot_imgspot_img

ಗುಜರಾತಿನಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತೀ ದೊಡ್ಡ ಮೃಗಾಲಯ!

- Advertisement -G L Acharya panikkar
- Advertisement -

ಮುಂಬೈ: ವಿಶ್ವದ ಅತೀ ದೊಡ್ಡ ಮೃಗಾಲಯ ಗುಜರಾತಿನ ಜಾಮ್ ನಗರದಲ್ಲಿ ನಿರ್ಮಾಣವಾಗಲಿದೆ. ರಿಲಯನ್ಸ್ ಸಂಸ್ಥೆ ಈ ಮೃಗಾಲಯ ನಿರ್ಮಾಣಕ್ಕೆ ಮುಂದಾಗಿದೆ. ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ಕನಸಿನ ಕೂಸು ಇದಾಗಿದೆ. ಇದು ವಿಶ್ವದ ಅತೀ ದೊಡ್ಡ ಮೃಗಾಲಯವಾಗಲಿದೆ ಎಂದು ರಿಲಯನ್ಸ್ ಸಂಸ್ಥೆಯ ಮೂಲಗಳು ಹೇಳಿವೆ.

ನೂರಕ್ಕೂ ಹೆಚ್ಚು ವಿವಿಧ ಜಾತಿಯ ಪ್ರಾಣಿಗಳು , ಪಕ್ಷಿಗಳು ಮತ್ತು ಉರಗಗಳಿಗೆ ಇದು ಆಶ್ರಯ ನೀಡಲಿದೆ. 280 ಎಕರೆ ಪ್ರದೇಶದಲ್ಲಿ ಈ ಮೃಗಾಲಯ ತಲೆ ಎತ್ತಲಿದೆ. ಜಾಮ್ ನಗರದಲ್ಲಿ ರಿಲಯನ್ಸ್ ಸಂಸ್ಥೆ ತೈಲ ಶುದ್ದೀಕರಣ ಘಟಕ ಹೊಂದಿದ್ದು, ಇದರ ಸಮೀಪದಲ್ಲಿಯೇ ಈ ಮೃಗಾಲಯ ನಿರ್ಮಾಣವಾಗಲಿದೆ.

- Advertisement -

Related news

error: Content is protected !!