Tuesday, June 23, 2026
spot_imgspot_img
spot_imgspot_img

ಕಳ್ಳತನಕ್ಕಾಗಿಯೇ ಡಯಟ್ ಮಾಡಿದ ಖತರ್ನಾಕ್ ಕಳ್ಳ!

- Advertisement -
- Advertisement -
vtv vitla
vtv vitla
vtv vitla
vtv vitla

ಅಹ್ಮದಾಬಾದ್‌: ಗುಜರಾತ್‌ನ ಅಹ್ಮದಾ ಬಾದ್‌ನ ಕಳ್ಳನೊಬ್ಬ, ಕಳ್ಳತನಕ್ಕಾಗಿಯೇ ಡಯೆಟ್‌ ಮಾಡಿದ್ದಾನೆ ಈತನ ಈ ಸಾಹಸದ ಕಥೆ ಕೇಳಿ ಪೊಲೀಸರೇ ಹುಬ್ಬೇರಿಸಿದ್ದಾರೆ. ಈತನ ಹೆಸರು ಮೋತಿಸಿಂಗ್‌ ಚೌಹಾನ್‌. ಈತ ಅಹ್ಮದಾಬಾದ್‌ನ ಬೋಪಲ್‌ ಪ್ರಾಂತ್ಯದಲ್ಲಿರುವ ಬಸಂತ್‌ ಬಹಾರ್‌ ಸೊಸೈಟಿ ಎಂಬಲ್ಲಿ ವಾಸವಾಗಿದ್ದ ಮೋಹಿತ್‌ ಮೊರಾಡಿಯಾ ಎಂಬುವರ ಮನೆಯಲ್ಲಿ ಎರಡು ವರ್ಷದ ಹಿಂದೆ ಕೆಲಸದಾಳಾಗಿದ್ದ.

ಹಾಗಾಗಿ, ಆತನಿಗೆ ಆ ಮನೆಯವರು ಬೆಲೆಬಾಳುವ ವಸ್ತುಗಳನ್ನು ಎಲ್ಲಿಡುತ್ತಾರೆಂದು ಗೊತ್ತಿತ್ತು. ಆ ಮನೆಗೆ ಕನ್ನ ಹಾಕಲು ನಿರ್ಧರಿಸಿದ್ದರೂ, ಆ ಮನೆಯ ಮುಂಬಾಗಿಲು ಹಾಗೂ ಹಿಂಬಾಗಿಲಿನಲ್ಲಿ ಸಿಸಿಟಿವಿ ಕ್ಯಾಮೆರಾ ಇದ್ದಿದ್ದರಿಂದ ಧೈರ್ಯ ಮಾಡಿರಲಿಲ್ಲ. ಆಗಲೇ ಆತನಿಗೆ ಅಡುಗೆ ಮನೆಯ ಕಿಟಕಿಯಿಂದ ಒಳತೂರಿ ಕಳ್ಳತನ ಮಾಡಲು ನಿಶ್ಚಯಿಸಿದ.

ಆದರೆ, ಆತನ ದೇಹ ಅದರಲ್ಲಿ ತೂರಲ್ಲ ಎಂಬುದನ್ನು ತಿಳಿದಿದ್ದ ಆತ, ಕಳೆದ ಮೂರು ತಿಂಗಳಿಂದ ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡುತ್ತಾ 75 ಕೆಜಿಯಿಂದ 65 ಕೆಜಿಗೆ ದೇಹದ ತೂಕ ಇಳಿಸಿ, ಆನಂತರ ಆ ಮನೆಯೊಳಗೆ ತೂರಿ 37 ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಕದ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!