Sunday, June 21, 2026
spot_imgspot_img
spot_imgspot_img

ಕುಂಡಡ್ಕ: ಗುಣಶ್ರೀ ವಿದ್ಯಾಲಯ ಕುಳ ಕುಂಡಡ್ಕ ಶಿಕ್ಷಕ-ರಕ್ಷಕ ಸಭೆ :

- Advertisement -
- Advertisement -

ಕುಂಡಡ್ಕ: ಗುಣಶ್ರೀ ವಿದ್ಯಾಲಯ ಕುಳ ಕುಂಡಡ್ಕದಲ್ಲಿ ಶಿಕ್ಷಕ-ರಕ್ಷಕ ಸಭೆಯು ಮಾಂದೆವ್‌ ಎಜುಕೇಷನಲ್‌ & ಚಾರಿಟೇಬಲ್‌ ಟ್ರಸ್ಟ್‌ (ರಿ.) ಮಂಗಳೂರು ಇದರ ಅಧ್ಯಕ್ಷರು ಬಿ ನಾಗರಾಜ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು.

ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪೋಷಕರ ಹಾಗೂ ಶಿಕ್ಷಕರ ಪಾತ್ರ ಬಹಳ ಪ್ರಮುಖವಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಶಿಕ್ಷಣ ಹಾಗೂ ಮಕ್ಕಳ ಬೆಳವಣಿಗೆಗೆ ಸಂಬಂಧಿಸಿದಂತೆ ಅನೇಕ ಸವಾಲುಗಳಿವೆ. ಶಿಕ್ಷಕರು ಮತ್ತು ಪೋಷಕರು ಜೊತೆಗೂಡಿದಾಗ ಈ ಸವಾಲುಗಳನ್ನು ಎದುರಿಸಬಹುದು ಎಂದು ಗುಣಶ್ರೀ ವಿದ್ಯಾಲಯ ಕುಳ ಇದರ ಅಧ್ಯಕ್ಷರು ಹಾಗೂ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಬಿ ನಾಗರಾಜ ಶೆಟ್ಟಿಯವರು ಶಿಕ್ಷಕ-ರಕ್ಷಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಂಚಾಲಕರಾದ ವೇಣುಗೋಪಾಲ ಶೆಟ್ಟಿ ಮರುವಾಳ ಪೋಷಕರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಮುಖ್ಯ ಗುರುಗಳಾದ ರಾಜಾರಾಮ ವರ್ಮ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ರೇಖಾ ಉಪಸ್ಥಿತರಿದ್ದರು.ಶಿಕ್ಷಕಿ ವಾಣಿಶ್ರೀ ನಿರೂಪಣೆಗೈದರು. ವನಜಾ ಮತ್ತು ಚೈತ್ರ ಪ್ರಾರ್ಥನಾ ಗೀತೆ ‌ಹಾಡಿದರು.ಶ್ರೀನಿಧಿ ಧನ್ಯವಾದಗಳನ್ನು ಸಲ್ಲಿಸಿದರು.

- Advertisement -

Related news

error: Content is protected !!