Tuesday, August 18, 2026
spot_imgspot_img
spot_imgspot_img

ಕಾರವಾರ: ಗೋಕರ್ಣದ ತದಡಿಯಲ್ಲಿ ಬೋಟ್ ಮುಳುಗಡೆ – ನಾಲ್ವರು ಮೀನುಗಾರರ ರಕ್ಷಣೆ

- Advertisement -
- Advertisement -

ಕಾರವಾರ: ಹೂಳು ಮತ್ತು ಅಲೆಗಳ ಅಬ್ಬರಕ್ಕೆ ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಸಮುದ್ರದ ಅಳವೆಯಲ್ಲಿ ಮುಳುಗಿ ಹೋಗಿದ್ದು, ಅದರಲ್ಲಿದ್ದ ನಾಲ್ವರು ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಭಾಗದ ತದಡಿ ಬಂದರಿನಲ್ಲಿ ನಡೆದಿದೆ.

ಸುರೇಂದ್ರ ಹರಿಕಂತ್ರ ಎನ್ನುವವರಿಗೆ ಸೇರಿದ ಲಕ್ಷ್ಮೀಕೃಪ ಎನ್ನುವ ಹೆಸರಿನ ಬೋಟ್ ಇದಾಗಿದ್ದು, ಇಂದು ಗೋಕರ್ಣದ ತದಡಿಯ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಆದರೆ ಸ್ವಲ್ಪ ದೂರದಲ್ಲೇ ಹೂಳು ತುಂಬಿದ ಅಳವೆಯಲ್ಲಿ ಸಿಲುಕಿಕೊಂಡು, ಅಲೆಗಳ ಹೊಡೆತಕ್ಕೆ ತಳಭಾಗದಲ್ಲಿ ಹಾನಿಯಾಗಿ ಮುಳುಗಿದೆ. ಬೋಟ್ ಮುಳುಗಡೆಯಿಂದ ಸುಮಾರು 20 ಲಕ್ಷ ರೂ. ಮೌಲ್ಯದ ಹಾನಿಯಾಗಿರುವುದಾಗಿ ತಿಳಿದುಬಂದಿದೆ.

ಎರಡು ದಿನದ ಹಿಂದೆ ಇದೇ ಜಾಗದಲ್ಲಿ ಶ್ರೀದೇವಿ ಹೆಸರಿನ ಬೋಟ್ ಮುಳುಗಡೆಯಾಗಿತ್ತು. ತದಡಿಯ ಅಳಿವೆಯ ಹೂಳಿನಿಂದ ಪದೇಪದೇ ಇದೇ ಜಾಗದಲ್ಲಿ ಬೋಟುಗಳು ಮುಳುಗುತ್ತಿದ್ದು, ಒಂದೇ ವಾರದಲ್ಲಿ ಎರಡು ಬೋಟ್ ಮುಳುಗಡೆಯಾಗಿದೆ.

- Advertisement -

Related news

error: Content is protected !!