Saturday, April 27, 2024
spot_imgspot_img
spot_imgspot_img

ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸುವಲ್ಲಿ ನಮ್ಮ ಪಾತ್ರ,ಶ್ರೀ ಗುರುಸ್ಮೃತಿ-2020 ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ.

- Advertisement -G L Acharya panikkar
- Advertisement -

ಮಂಗಳೂರು:-ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರೆಂಬ ವಿಶ್ವಮಾನವ ಸಂದೇಶವನ್ನು ಈ ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ 166 ನೆಯ ಜಯಂತಿಯ ಅಂಗವಾಗಿ, ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ಬಳಗ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಯುವವಾಹಿನಿ ರಿ ಕೊಲ್ಯ ಘಟಕದ ಸಹಭಾಗಿತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸುವಲ್ಲಿ ನಮ್ಮ ಪಾತ್ರ- ವಿಡಿಯೋ ಪ್ರಬಂಧ ಮಂಡನಾ ಸ್ಪರ್ಧೆಯ ಶ್ರೀ ಗುರುಸ್ಮೃತಿ-2020 ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆಯ ಸಭಾ ಕಾರ್ಯಕ್ರಮ ಮಂಗಳೂರಿನ ಶ್ರೀ ಕ್ಷೇತ್ರ ಕುದ್ರೋಳಿಯ ಗ್ಲಾಸ್ ಹೌಸಿನಲ್ಲಿ ಜರುಗಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಡಾ.ಬಿ.ಎಲ್.ಧರ್ಮರವರು ಮಾತನಾಡಿ, ಬಾಲ್ಯದಿಂದಲೂ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಯದ ಪರಿಪಾಲನೆಗೆ ಅತ್ಯಂತ ಮಹತ್ವವನ್ನು ನೀಡುತ್ತಿದ್ದರು, ಅನುಕೂಲಶಾಸ್ತ್ರವನ್ನು ವೈಜ್ಞಾನಿಕವಾಗಿ ಆಲೋಚನೆ ಮಾಡಿ, ಜೀವನದಲ್ಲಿ ಸನ್ಮಾರ್ಗದಲ್ಲಿ ನಡೆಯುವುದು ಧರ್ಮವೆಂದು ಗುರುಗಳ ಆದರ್ಶಗಳ ಬಗ್ಗೆ ಬೆಳಕು ಚೆಲ್ಲಿದರು..

ಈ ಸಂದರ್ಭದಲ್ಲಿ ಕುಮಾರಿ ರಕ್ಷಾ ಹೆಚ್.ಎಸ್.ಪೂಜಾರಿ ಕೊಣಾಜೆ ಇವರು ಹಾಡಿದ ಭಕ್ತಿಗೀತೆಯ ಆಡಿಯೋ ಹಾಗೂ ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ಬಳಗ ನಿರ್ಮಾಣದ ಗುರುಪೀಠದ ಸತ್ಯ ಸಾಯನ ಬೈದ್ಯರ ಭಕ್ತಿಗೀತೆ ಯ ಆಡಿಯೋ ದ ಧ್ವನಿಮುದ್ರಣವನ್ನು ಜನಪದ ವಿದ್ವಾಂಸರಾದ ಗಣೇಶ್ ಅಮೀನ್ ಸಂಕಮಾರ್ ಬಿಡುಗಡೆಗೊಳಿಸಿದರು.ಗುರುಪೀಠದ ಸತ್ಯ ಧ್ವನಿಮುದ್ರಣದ ಸಾಹಿತ್ಯ ಬರೆದವರು ಉಮಾನಾಥ ಕೋಟ್ಯಾನ್ ತೆಂಕಕಾರಂದೂರು,ಗಾಯಕ ರಂಜಿತ್ ಪೂಜಾರಿ ಗಾಯಕಿ ಗ್ರೀಷ್ಮಾ ಕಟೀಲು ಇವರನ್ನು ಗೌರವಿಸಲಾಯಿತು. ಕುಮಾರಿ.ರಕ್ಷಾ.ಹೆಚ್.ಎಸ್.ಪೂಜಾರಿ ಕೊಣಾಜೆ ಇವರನ್ನು ಗೌರವಿಸಲಾಯಿತು.

ಶ್ರೀ ಗುರುಸ್ಮೃತಿ 2020 ರ ಬಗ್ಗೆ ಉಪನ್ಯಾಸವನ್ನು ನೀಡಿದ ಜನಪದ ವಿದ್ವಾಂಸರಾದ ಡಾ.ಗಣೇಶ್.ಅಮೀನ್.ಸಂಕಮಾರ್ ರವರು ಈ ಸಂದರ್ಭದಲ್ಲಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಮತ್ತು ಅದರ ಮಹತ್ವದ ಕುರಿತು ವ್ಯಾಖ್ಯಾನಿಸಿದರು. ನಾರಾಯಣ ಗುರುಗಳು ಒಂದೇ ಜಾತಿಗೆ ಸೀಮಿತರಾದವರಲ್ಲ, ಅವರು ತತ್ವಗಳನ್ನು ಸ್ವತಃ ಪಾಲಿಸಿ, ನಂತರ ಮತ್ತೊಬ್ಬರಿಗೆ ಬೋಧಿಸಿ ಮನುಕುಲದ ದೀಪವನ್ನು ಬೆಳಗಿಸಿರು.
ಬಳಿಕ ಕ್ರೀಡಾಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಅಂತರಾಷ್ಟ್ರೀಯ ಕ್ರೀಡಾಪಟು ಅಕ್ಷತಾ ಪೂಜಾರಿ ಬೋಳ,ಚಿತ್ರಕಲಾವಿದ ಪ್ರವೀಣ್ ಪುತ್ತೂರು,ಕಥೆ ಕವನಗಳ ಬರಹಗಾರ ಧೀರಜ್ ಪೂಜಾರಿ ಪೊಯ್ಯಕಂಡ ಇವರನ್ನು ಗೌರವಿಸಿ ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಕೋಟೆಕಾರು ನಿವಾಸಿ ರವೀಂದ್ರ ಗಟ್ಟಿ ಇವರ ಪುತ್ರಿಯ ವೈದ್ಯಕೀಯ ವೆಚ್ಚದ ನೆರವಿಗಾಗಿ ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಷನ್, ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರ ಇದರ ವತಿಯಿಂದ ಧನಸಹಾಯವನ್ನು ಹಸ್ತಾಂತರಿಸಲಾಯಿತು.

ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕ್ಷೇತ್ರಾಡಳಿತ ಮಂಡಳಿಯ ಕೋಶಾಧಿಕಾರಿ ಆರ್.ಪದ್ಮರಾಜ್ ಇವರು ಮಾತನಾಡಿ ಕಡಲಾಚೆಯ ವಿದೇಶಗಳಲ್ಲಿ ನೆಲೆಸಿದ ಪಾತಕಿಗಳು ಭೂಗತ ಜಗತ್ತಿನ ನಂಟಿಗೆ ನಮ್ಮೂರಿನ ಮುಗ್ಧ ಯುವಕರನ್ನು ಪ್ರೇರೇಪಿಸುವ ಕಾಲವೊಂದಿತ್ತು ಅದು ಈಗ ಮರೆಯಾಗುತ್ತಿದೆ ಕಾಲ ಬದಲಾಗುತ್ತಿದೆ ಇದೀಗ ನಮ್ಮೂರಿನ ಯುವಕರು ಸೇವಾ ಮಾಣಿಕ್ಯದಾತರೆಂಬ ನಿಸ್ವಾರ್ಥ ಸೇವಕರು ಕಡಲಾಚೆಯ ವಿದೇಶದಲ್ಲಿ ನೆಲೆಸಿ ಕಷ್ಟ ಪಟ್ಟು ದುಡಿದ ಕಿಂಚಿತ್ ಹಣವನ್ನು ಕ್ರೋಢೀಕರಿಸಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡು ನಮ್ಮೂರಿನ ಯುವಕರನ್ನು ಸಮಾಜದ ಸೇವೆ ಮಾಡಲು ಪ್ರೇರೇಪಿಸುವುದರೊಂದಿಗೆ ಹೊರದೇಶದಲ್ಲಿ ನೆಲೆಸಿದ ಚಂದ್ರಶೇಖರ ಪೂಜಾರಿ ಬಂಟ್ವಾಳ ಹಾಗೂ ನವೀಶ್ ಎರ್ಮಾಳು ಇವರ ಸಹಕಾರದಿಂದ ಜರುಗಿದ ಇಂದಿನ ಈ ಕಾರ್ಯಕ್ರಮ ಶ್ಲಾಘನೀಯ ಎಂದು ನುಡಿದರು.

ಪ್ರೌಢಶಾಲಾ, ಕಾಲೇಜು ಮತ್ತು ಸಾರ್ವಜನಿಕ ವಿಭಾಗ ಹೀಗೆ ಮೂರು ವಿಭಾಗಗಳಲ್ಲಿ ಆಯೋಜನೆಗೊಂಡ ವಿಡಿಯೋ ಪ್ರಬಂಧ ಮಂಡನಾ ಸ್ಪರ್ಧೆಯ ವಿಜೇತರ ವಿವರವನ್ನು ಯುವವಾಹಿನಿ ರಿ ಕೇಂದ್ರ ಸಮಿತಿ ಮಂಗಳೂರು ಇದರ ಪ್ರಚಾರ ನಿರ್ದೇಶಕರಾದ ಕುಸುಮಾಕರ ಕುಂಪಲ ಇವರು ಘೋಷಿಸಿ ,ಬಿಲ್ಲವ ಸೇವಾಮಾಣಿಕ್ಯದಾತರ ಸಮಾಗಮ ಬಳಗ ಮತ್ತು ಯುವವಾಹಿನಿ (ರಿ.)ಕೊಲ್ಯ ಘಟಕದ ಸಹಭಾಗಿತ್ವಕ್ಕೆ ಬ್ರಹ್ಮ ಶ್ರೀ ನಾರಾಯಣ ಗುರು ಅಧ್ಯಯನ ಪೀಠ,ಮಂಗಳೂರು ವಿಶ್ವವಿದ್ಯಾನಿಲಯ ದ ಸಹಭಾಗಿತ್ವ ಹಾಗೂ ಪ್ರೋತ್ಸಾಹ ದೊರಕಿರುವುದರಿಂದ ಕ್ರೀಯಾತ್ಮಕವಾಗಿ ಮೂಡಿಬಂದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸ್ಪರ್ಧಾಳುಗಳು ಭಾಗವಹಿಸಿ ವಿಶೇಷ ಯಶಸ್ಸು ಕಾಣಲು ಕಾರಣವಾಯ್ತು ಅದೇ ರೀತಿ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಕೃತಜ್ಞತೆಯನ್ನು ಸಲ್ಲಿಸಿ,ಗುರುಸ್ಮೃತಿ-2020 ರ ಯಶಸ್ಸಿಗೆ ಗೋಕರ್ಣನಾಥ ಕ್ಷೇತ್ರಾಡಳಿತ ಮಂಡಳಿಯ ಸಹಕಾರವನ್ನು ಸ್ಮರಿಸಿದರು.

ರಾಜ್ಯದ ವಿವಿಧ ಭಾಗಗಳಿಂದ ವಿವಿಧ ಸಮಾಜದ ನೂರ ಹನ್ನೊಂದು ಸ್ಪರ್ಧಾಳುಗಳು ಭಾಗವಹಿಸಿದ ಈ ಸ್ಪರ್ಧೆಯಲ್ಲಿ ಒಂದನೇ ತರಗತಿಯ ಸ್ನಿತಿಕ್.ಎನ್.ಪೂಜಾರಿ ಪಡೀಲು ಮಂಗಳೂರು ಇವರು ಆಕರ್ಷಕ ಬಹುಮಾನವನ್ನು ಪಡೆದಿರುತ್ತಾರೆ.ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ವೀಕ್ಷಣೆಯಾದ ಪ್ರಬಂಧ ಕ್ಕೆ ನಳಿನಿ.ಎಸ್.ಸುವರ್ಣ ಇವರು ಬಹುಮಾನ ಪಡೆದಿರುತ್ತಾರೆ‌.

ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಲಿಖಿತಾ ಫಿಲೋಮಿನಾ ಪ್ರೌಢಶಾಲೆ ಪುತ್ತೂರು, ದ್ವಿತೀಯ ಸ್ಥಾನವನ್ನು ಕ್ರಮವಾಗಿ ಶರಣ್ಯ.ಪಿ. ಆನಂದಾಶ್ರಮ ಪ್ರೌಢಶಾಲೆ ಸೋಮೇಶ್ವರ ಕೋಟೆಕಾರು ಹಾಗೂ ಲಹರಿ.ಕೆ.ಪೂಜಾರಿ ಎರ್ಲಪ್ಪಾಡಿ ಸರಕಾರಿ ಪ್ರೌಢಶಾಲೆ ಬೈಲೂರು ಇವರು ಪಡೆದಿರುತ್ತಾರೆ.
ತೃತೀಯ ಸ್ಥಾನವನ್ನು ಕ್ರಮವಾಗಿ ಪ್ರತ್ಯುಷ.ಕೆ.ಪುತ್ತೂರು ರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಹಾಗೂ ಶಿವಾನಿ.ಎಸ್.ಪೂಜಾರಿ.ಪೇತ್ರಿ ಎಸ್.ಆರ್.ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಪಡೆದಿರುವರು.

ಕಾಲೇಜು ವಿಭಾಗದಲ್ಲಿ ಪ್ರಥಮ ಸ್ಥಾನ ಐಶ್ವರ್ಯ ನರಸಿಂಹ ಪೂಜಾರಿ ಬಾರ್ಕೂರು, ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ಉಡುಪಿ.ದ್ವಿತೀಯ ಸ್ಥಾನ ಪ್ರಜ್ವಲ್ ಕೋಟ್ಯಾನ್ ಆಳ್ವಾಸ್ ಕಾಲೇಜು ಮೂಡುಬಿದಿರೆ ಹಾಗೂ ತೃತೀಯ ಸ್ಥಾನವನ್ನು ಪ್ರಥ್ವೀಷ್ ಧರ್ಮಸ್ಥಳ ಎಸ್.ಡಿ.ಎಂ.ಕಾಲೇಜು ಧರ್ಮಸ್ಥಳ ಇವರು ಪಡೆದಿರುವರು.
ಸಾರ್ವಜನಿಕ ವಿಭಾಗದಲ್ಲಿ ಪ್ರಥಮ ಸ್ಥಾನ ನಿತಿನ್.ಬಂಗೇರ ಗುರುವಾಯನಕೆರೆ,ದ್ವಿತೀಯ ಸ್ಥಾನ ಸುಶ್ಮಿತಾ.ಆರ್.ಪೂಜಾರಿ ಕುಂಬಳೆ,ಕಾಸರಗೋಡು ಹಾಗೂ ತೃತೀಯ ಸ್ಥಾನವನ್ನು ಲೋಕೇಶ್ ಪೂಜಾರಿ ಉಡುಪಿ ಇವರು ಪಡೆದಿರುತ್ತಾರೆ.

ಶ್ರೀ ಗುರುಸ್ಮೃತಿ-2020 ರ ವಿಡಿಯೋ ಪ್ರಬಂಧ ಮಂಡನಾ ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯ ಸಾಹಿತಿ ರಮಾನಾಥ್ ಕೋಟೆಕಾರ್, ಕನ್ನಡ ಭಾಷಾ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮೀ ಕಟೀಲು,ಯಕ್ಷಗಾನ ಕಲಾವಿದ,ವಾಗ್ಮಿ,ಡಾ.ದಿನಕರ್.ಎಸ್.ಪಚ್ಚನಾಡಿ ಇವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಅವಿನಾಶ್ ಎಂಟರ್ ಪ್ರೈಸಸ್ ಉಳ್ಳಾಲ, ಎಚ್.ಪಿ.ಗ್ಯಾಸ್ ವಿತರಕರಾದ ಶಶಿರಾಜ್ ಕುಂಪಲರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯದ ನಿರ್ದೆಶಕರಾದ ಮುದ್ದು ಮೂಡುಬೆಳ್ಳೆ, ಯುವವಾಹಿನಿ(ರಿ.) ಕೊಲ್ಯ ಘಟಕದ ತತ್ವ ಪ್ರಚಾರ ನಿರ್ದೇಶಕರಾದ ಜಗಜೀವನ್ ಕೊಲ್ಯ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಯಶಸ್ವೀ ಕಾರ್ಯಕ್ರಮಕ್ಕೆ ಬ್ರಹ್ಮ ಶ್ರೀ ನಾರಾಯಣ ಗುರು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಇದರ ಸಲಹಾ ಸಮಿತಿಯ ಸದಸ್ಯೆ ನಮಿತಾ ಶ್ಯಾಂ ಇವರು ಸಂಪೂರ್ಣ ಸಹಕಾರವನ್ನಿತ್ತಿದ್ದರು.

ಯುವವಾಹಿನಿ ರಿ ಕೊಲ್ಯ ಘಟಕದ ಅಧ್ಯಕ್ಷರಾದ ರವಿ ಕೊಂಡಾಣ ಇವರು ಸ್ವಾಗತ ಭಾಷಣಗೈದರು.ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ಬಳಗದ ಸದಸ್ಯ ದಿನೇಶ್ ಸುವರ್ಣ ರಾಯಿಯವರು ಪ್ರಸ್ತಾವನೆಗೈದರು. ಯುವವಾಹಿನಿ ರಿ ಕೊಲ್ಯ ಘಟಕದ ಸದಸ್ಯರಾದ ಮುಕೇಶ್ ಕಿನ್ಯ ಮತ್ತು ಅನೀಶ್ ಕಿನ್ಯ ಸಹೋದರರು ಪ್ರಾರ್ಥನೆ ನೆರವೇರಿಸಿದರು. ಕು.ಪ್ರಜ್ಞಾ ಓಡಿಳ್ನಾಲ ಮತ್ತು ಲತೀಶ್.ಎಂ.ಸಂಕೋಳಿಗೆ ಕಾರ್ಯಕ್ರಮ ನಿರ್ವಹಿಸಿದರು. ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ಬಳಗದ ಸದಸ್ಯರಾದ ಅಜಿತ್ ಕುಮಾರ್ ಪೂಜಾರಿ ಪಜೀರು ಧನ್ಯವಾದ ಸಮರ್ಪಿಸಿದರು.

- Advertisement -

Related news

error: Content is protected !!