ಮಂಗಳೂರು:-ಮಂಗಳೂರು ಹಳೆಯ ವಿಮಾನ ನಿಲ್ದಾಣ ಸಮೀಪದಲ್ಲಿ ಉದ್ದೇಶಿತ ಹಜ್ ಭವನಕ್ಕೆ ಕಾದಿರಿಸಿದ ಸ್ಥಳದಲ್ಲಿ ಹಜ್ ಭವನ ನಿರ್ಮಿಸದೆ ಬೇರೊಂದು ಸ್ಥಳದಲ್ಲಿ ಹಜ್ ಭವನ ನಿರ್ಮಾಣಕ್ಕೆ ಸ್ಥಳಾಂತರಿಸುವ ನಿರ್ಧಾರಕ್ಕೆ ವಿರೋಧ,
ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಖಂಡನೆ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರದ ಅಲ್ಪ ಸಂಖ್ಯಾತ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ಹಜ್ ಕಮಿಟಿಯ ಉದ್ದೇಶಿತ ಮಂಗಳೂರು ಬಜ್ಪೆ ಪ್ರದೇಶದಲ್ಲಿ ಸರ್ಕಾರವು, ಈಗಾಗಲೇ ಸುಮಾರು 2 ಎಕ್ರೆ ಅಧಿಕವಾಗಿ ಜಮೀನನ್ನು ಮಂಜೂರು ಮಾಡಲಾಗಿದ್ದು, ಸದ್ರಿ ಜಮೀನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಾಗಿರುವುದರಿಂದ ಹಜ್ ಭವನ ನಿರ್ಮಾಣಕ್ಕೆ ಸೂಕ್ತ ವಾದ ಸ್ಥಳ ಎಂದು ಜನಾಭಿಪ್ರಾಯ ಕೇಳಿ ಬರುತ್ತಿದ್ದು ಪ್ರಸ್ತುತ ಸರ್ಕಾರದಿಂದ ಮಂಜೂರಾದ ಹಜ್ ಭವನ ನಿರ್ಮಾಣಕ್ಕೆ ಬಜೆಟ್ಟಿನಲ್ಲಿ ಮಂಜೂರಾದ ಹಣದಲ್ಲಿ ಅದೇ ಸ್ಥಳದಲ್ಲಿ ಹಜ್ ಭವನ ನಿರ್ಮಾಣ ಮಾಡಬೇಕೆಂದು ಮುಸ್ಲಿಂ ಸಮುದಾಯ ಒಕ್ಕೊರಲಿನ ಬೇಡಿಕೆಯಾಗಿದ್ದು ಯಾವುದೇ ಕಾರಣಕ್ಕೂ ಬಜಪೆ ಪ್ರದೇಶದಿಂದ ಸದ್ರಿ ಯೋಜನೆಯನ್ನು ಮಂಗಳೂರಿನ ಅಡ್ಯಾರ್ ಕಣ್ಣೂರು ಎಂಬಲ್ಲಿನ ಫಾತಿಮಾ ಕುಟುಂಬದವರು ಧಾನವಾಗಿ ನೀಡಿದ ವಿಸ್ತೀರ್ಣ(65 ಸೆಂಟ್ಸ್) ಜಮೀನಿನಲ್ಲಿ ಹಜ್ ಭವನ ನಿರ್ಮಾಣ ಮಾಡುವ ಬಗ್ಗೆ ಹಜ್ ಭವನ ನಿರ್ಮಾಣ ಸಮಿತಿಯ ಕೆಲವು ಸದಸ್ಯರು ಒಲವು ಹೊಂದಿದ್ದು, ಈ ನಿಲುವು ಹಜ್ ಯಾತ್ರಿಗಳಿಗೆ ಯಾವುದೇ ಪ್ರಯೋಜನ ಆಗಲಾರವು,
ಮತ್ತು ಹಜ್ ಭವನ ಯಾವುದೇ ಉಪಯೋಗಕ್ಕೂ ಬರದೆ ಅಸಮರ್ಪಕವಾಗ ಬಹುದೆಂದು ಜನಾಭಿಪ್ರಾಯ ವಿರುವುದರಿಂದ ಹಜ್ ನಿರ್ಮಾಣ ಸಮಿತಿಯು ಕಣ್ಣೂರಿನ ಯೋಜನೆಯನ್ನು ಕೂಡಲೇ ಹಿಂಪಡೆದು ಬಜ್ಪೆಯ ಸರ್ಕಾರದ ಜಮೀನಿನಲ್ಲಿ ಹಜ್ ಭವನ ನಿರ್ಮಾಣಕ್ಕೆ ನಿರ್ಧಾರ ಮಾಡಬೇಕಾಗಿ ಸಾಮೂಹಿಕ ಬೇಡಿಕೆ ಆಗಿರುತ್ತದೆ.ತನ್ನ ನಿರ್ಧಾರವನ್ನು ಶೀಘ್ರ ದಲ್ಲಿಯೇ ಪುನರ್ ಪರಿಶೀಲನೆ ನಡೆಸಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಕೆ.ಅಶ್ರಫ್ ಅಧ್ಯಕ್ಷರು (ಮಾಜಿ ಮೇಯರ್) ಮನವಿ ಮಾಡಿದ್ದಾರೆ.