Tuesday, July 28, 2026
spot_imgspot_img
spot_imgspot_img

ಸಿಲಿಗುರಿ ಕಾರಿಡಾರ್‌ನ 120 ಎಕರೆ ಭೂಮಿ ಕೇಂದ್ರ ಸರಕಾರಕ್ಕೆ ಹಸ್ತಾಂತರ- ಸಿಎಂ ಸುವೇಂದು ಅಧಿಕಾರಿ ಮಹತ್ವದ ನಿರ್ಧಾರ

- Advertisement -
- Advertisement -

ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸಿಎಂ ಸುವೇಂದು ಅಧಿಕಾರಿ ಅವರು ಇಂದು ಮಹತ್ವದ ನಿರ್ಧಾರ ತೆಗೆದುಗೊಂಡಿದ್ದು, ಸಿಲಿಗುರಿ ಕಾರಿಡಾರ್ (ಚಿಕನ್ ನೆಕ್) ನಲ್ಲಿರುವ 120 ಎಕರೆ ಭೂಮಿಯನ್ನು ಕೇಂದ್ರ ಸರಕಾರಕ್ಕೆ ಹಸ್ತಾಂತರ ಮಾಡಿದೆ.

ಈಶಾನ್ಯ ರಾಜ್ಯಗಳನ್ನು ಮುಖ್ಯ ಭೂಭಾಗಕ್ಕೆ ಸಂಪರ್ಕಿಸುವ ಕಿರಿದಾದ ಪ್ರದೇಶವಾದ ಸಿಲಿಗುರಿ ಕಾರಿಡಾ‌ರ್, ನೇಪಾಳ, ಭೂತಾನ್, ಬಾಂಗ್ಲಾದೇಶ ಮತ್ತು ಚೀನಾದ ಗಡಿಗಳನ್ನು ಹೊಂದಿದೆ. ಇದೀಗ ಇಲ್ಲಿನ 120 ಎಕರೆ ಭೂಮಿಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸುವ ಮೂಲಕ ಕಾರಿಡಾರ್ ಉದ್ದಕ್ಕೂ ಭದ್ರತೆ, ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಗುರಿ ಹೊಂದಿದೆ.

ಈ ಕಾರಿಡಾರ್ ಈಶಾನ್ಯ ರಾಜ್ಯಗಳನ್ನು ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಭೂ ಮಾರ್ಗವಾಗಿದ್ದು, ಅತ್ಯಂತ ಕಿರಿದಾದ ಭಾಗವು ಕೇವಲ 17 ರಿಂದ 22 ಕಿಲೋಮೀಟರ್ ಮಾತ್ರ ಅಗಲವಿದೆ. ವ್ಯಾಪಾರ, ಸರಕುಗಳ ಸಾಗಣೆ ಮತ್ತು ಮಿಲಿಟರಿ ಸಂಚಾರಕ್ಕೂ ಇದು ಏಕೈಕ ಭೂ ಮಾರ್ಗವಾಗಿದೆ.

ಈ ಕಾರಿಡಾರ್ ಅಸ್ಸಾಂ, ಸಿಕ್ಕಿಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಸೇರಿದಂತೆ ಈಶಾನ್ಯದ 8 ರಾಜ್ಯಗಳಿಗೆ ಸಂಚರಿಸಲು ಇರುವ ಏಕೈಕ ರಸ್ತೆ ಮತ್ತು ರೈಲ್ವೆ ಮಾರ್ಗವಿದೆ. ಈ ಮೂಲಕವೇ ಎಲ್ಲಾ ತೈಲ ಪೈಪ್‌ಲೈನ್‌ಗಳು, ಇಂಟರ್ನೆಟ್ ಕೇಬಲ್‌ಗಳು ಮತ್ತು ಸೇನಾ ವಾಹನಗಳು ಹಾದುಹೋಗಬೇಕಿದೆ. ಒಂದು ವೇಳೆ ಈ ಭೂಭಾಗದ ಮೇಲೆ ದಾಳಿ ಚೀನಾ ನಡೆಸಿದರೆ, ಇಡೀ ಈಶಾನ್ಯ ಭಾರತವು ದೇಶದ ಉಳಿದ ಭಾಗದಿಂದ ಸಂಪೂರ್ಣವಾಗಿ ಸಂಪರ್ಕ ಕಡಿತಗೊಳ್ಳುತ್ತದೆ. ಆದ್ದರಿಂದ ಭಾರತೀಯ ಸೇನೆ ಇಲ್ಲಿ ಹದ್ದಿನ ಕಣ್ಣಿಟ್ಟಿದೆ.

- Advertisement -

Related news

error: Content is protected !!