Wednesday, July 22, 2026
spot_imgspot_img
spot_imgspot_img

ವಿಟ್ಲ: ಶ್ರೀ ರಾಮ ಮಂದಿರ ಹನುಮಗಿರಿಯಲ್ಲಿ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ

- Advertisement -
- Advertisement -

ವಿಟ್ಲ: ಶ್ರೀ ರಾಮ ಮಂದಿರ ಹನುಮಗಿರಿಯಲ್ಲಿ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆಯು ರಾಧಾಕೃಷ್ಣ ಪೈ ಹಾಗೂ ಅನುರಾಧಾ ಆ‌ರ್. ಪೈ ಅವರ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.

ಈ ಸಂದರ್ಭದಲ್ಲಿ ಕಾಸರಗೋಡಿನ ಮೇಧಾ ಕಾಮತ್ ಅವರಿಂದ ಭಜನೆ ಕಾರ್ಯಕ್ರಮ ನಡೆಯಿತು. ವಿಟ್ಲ ಜಿ.ಎಸ್.ಬಿ. ಸಮಾಜ ಹಾಗೂ ಶ್ರೀ ರಾಮ ಮಂದಿರದ ಅಧ್ಯಕ್ಷ ಸುಭಾಷ್‌ ಚಂದ್ರ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ಜರುಗಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಹಾಗೂ ಲೆಕ್ಕ ಪರಿಶೋಧಕ ಸಿಎ ನಂದಗೋಪಾಲ ಶೆಣೈ ಮತ್ತು ಮಂಗಳೂರು ದೇವಗಿರಿ ಟೀ & ಪ್ರೊಡ್ಯೂಸ್‌ನ ಮಾಲಕಿ ಉಷಾ ಶೆಣೈ ಅವರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ನಮೃತಾ ನವನೀತ ಭಟ್ ಸ್ವಾಗತಿಸಿದರು. ಸ್ವಾತಿ ವಿಕಾಸ್ ಭಟ್ ಪ್ರಾರ್ಥನೆ ಸಲ್ಲಿಸಿದರು. ಕೃಷ್ಣ ಪ್ರಸಾದ್ ಶೆಣೈ ಪ್ರಸ್ತಾವನೆ ನೀಡಿದರು. ಅಕ್ಷತಾ ಪೈ ವಂದನಾರ್ಪಣೆ ಮಾಡಿದರು. ಸ್ವರ್ಣಾ ಸುಭಾಷ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!