Wednesday, June 17, 2026
spot_imgspot_img
spot_imgspot_img

ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ; ಪ್ರಕರಣ ದಾಖಲು..!

- Advertisement -
- Advertisement -

ಮದುವೆಯಾದ 10 ವರ್ಷದ ಬಳಿಕ ವರದಕ್ಷಿಣೆ ತರುವಂತೆ ಹೆಂಡತಿಗೆ ಗುಂಡು ಪಿನ್ನಿಂದ ಚುಚ್ಚಿ ಚಿತ್ರ ಹಿಂಸೆ ನೀಡಿರೋ ಅಮಾನವೀಯ ಕೃತ್ಯ ಚಿತ್ರದುರ್ಗದಲ್ಲಿ ನಡೆದಿದೆ.

ಕಿರುಕುಳ ನೀಡುವ ವ್ಯಕ್ತಿ ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ದೊಡ್ಡ ಉಲ್ಳಾರ್ತಿ ಗ್ರಾಮದ ರಾಜಣ್ಣ ಹಾಗೂ ಪತ್ನಿ ಗೌರಮ್ಮ ಎಂದು ಗುರುತಿಸಲಾಗಿದೆ.

ಗೌರಮ್ಮ ತೊಡೆಯ ಭಾಗಕ್ಕೆ ಸಲಾಕೆಯಿಂದ ಬರೆ ಹಾಕಲಾಗಿದ್ದು, ಸಿಗರೇಟ್‌ನಿಂದ ಸುಟ್ಟು ವಿಕೃತಿ ಮೆರೆದಿದ್ದಾನೆ ಎನ್ನಲಾಗ್ತಿದೆ. ಗೌರಮ್ಮ ರಾಜಣ್ಣ ದಂಪತಿಗೆ ಎರಡು ಗಂಡು ಹಾಗೂ ಒಂದು ಹೆಣ್ಣು ಮಗುವಿದ್ದು, ಕಳೆದ 7 ವರ್ಷದಿಂದ ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ಪತ್ನಿ ಗೌರಮ್ಮ ಆರೋಪಿಸಿದ್ದಾರೆ. ಸದ್ಯ ನನಗೆ ನ್ಯಾಯ ಕೊಡಿಸಿ ಅಂತಾ ಗೌರಮ್ಮ ಠಾಣೆ ಮೆಟ್ಟಿಲೇರಿದ್ದು, ಪಾಪಿ ಪತಿಯ ವಿರುದ್ಧ ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!