Friday, September 18, 2026
spot_imgspot_img
spot_imgspot_img

ಕಾರು ಫಾಲೋ ಮಾಡಿ ಮಹಿಳೆಯರಿಗೆ ಕಿರುಕುಳ – ಮೂರು ಜನ ಅರೆಸ್ಟ್‌

- Advertisement -
- Advertisement -

ಬೆಂಗಳೂರಿನ ಮಡಿವಾಳ ಅಂಡರ್ ಬ್ರಿಡ್ಜ್‌ನಿಂದ ಕೋರಮಂಗಲ 5ನೇ ಬ್ಲಾಕ್‌ವರೆಗೂ ಒಂದೇ ಬೈಕ್‌ನಲ್ಲಿ ಬಂದಿದ್ದ ಮೂವರು ಕಿಡಿಗೇಡಿಗಳು ಮಹಿಳೆಯ ಕಾರ್‌ ಫಾಲೋ ಮಾಡಿಕೊಂಡು ಬಂದಿದ್ದು, ಅಲ್ಲದೇ ಕೋರಮಂಗಲದಲ್ಲಿ ಕಾರು ಡೋರ್ ಓಪನ್ ಮಾಡಲು ಯತ್ನಿಸಿದ್ದಾರೆ. ಯುವಕರು ಕಾರು ಫಾಲೋ ಮಾಡುವುದನ್ನು ಕಂಡು ಭಯಭೀತಳಾದ ಮಹಿಳೆ ಆತಂಕದಿಂದಲೇ ಕಾರು ಚಲಾಯಿಸಿಕೊಂಡು 112 ಗೆ ಕರೆ ಮಾಡಿದ್ದಾರೆ.ನಂತರ ಕೋರಮಂಗಲ 5ನೇ ಬ್ಲಾಕ್‌ನಲ್ಲಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.

ಮಹಿಳೆ ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿಗಳ ಗುರುತು ಪತ್ತೆ ಹಚ್ಚಿ ಬಂಧಿಸಿದ್ದಾರೆ.ಬಂಧಿತರನ್ನು ತೇಜಸ್, ಜಗನ್ನಾಥ್ ಮತ್ತು ಕಣ್ಣನ್ ಎಂದು ಗುರುತಿಸಲಾಗಿದೆ.ಪರಾರಿಯಾಗಿರುವ ಉಳಿದವರಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಮಾರ್ಚ್ 31 ರ ರಾತ್ರಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುವ ಇಬ್ಬರು ಮಹಿಳೆಯರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಮಯದಲ್ಲಿ ಅವರು ತಮ್ಮ ಕಾರಿನ ಇಂಡಿಕೇಟರ್ ಆನ್ ಮಾಡಿದ್ದಾರೆ. ಆದರೆ ತಮ್ಮ ಕಾರನ್ನು ಸೂಚಕದ ವಿರುದ್ಧ ದಿಕ್ಕಿನಲ್ಲಿ ತಿರುಗಿಸಿದರು. ಈ ವಿಚಾರವಾಗಿ ಬೈಕ್‌ ಸವಾರರು ಮಹಿಳೆಯರೊಂದಿಗೆ ವಾಗ್ವಾದ ನಡೆಸಿದ್ದಾರೆ.ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಅಲ್ಲದೆ, ಮಹಿಳೆಯರು ಕಾರು ಚಾಲನೆ ಮಾಡಿ ಅಲ್ಲಿಂದ ತೆರಳಿದ್ದಾರೆ.

ಅಷ್ಟಕ್ಕೂ ಸುಮ್ಮನಾಗದ ಯುವಕರು ಕಾರನ್ನು ಫಾಲೋ ಮಾಡಿದ್ದಾರೆ. ಚಾಲನೆಯಲ್ಲಿರುವಾಗಲೇ ಕಾರಿನ ಬಾಗಿಲು ತೆರೆಯಲು ಯತ್ನಿಸಲಾಗಿದೆ. ಗಾಬರಿಗೊಂಡ ಮಹಿಳೆ ಕಿರುಚಿಕೊಂಡು ಕಾರನ್ನು ಇನ್ನಷ್ಟು ವೇಗವಾಗಿ ಚಲಾಯಿಸಿದ್ದಾರೆ. ಆರೋಪಿಗಳು ಕಾರನ್ನು ಸುತ್ತುವರಿದು ಬೆದರಿಸಿದ ಹಿನ್ನೆಲೆ ಕೂಡಲೇ ಮಹಿಳೆಯರು 112 ಗೆ ಕರೆ ಮಾಡಿ ದೂರು ನೀಡಿದ್ದು, ತಾವು ಹೋಗುತ್ತಿರುವ ರಸ್ತೆಯ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೆ, ಆರೋಪಿಗಳಿದ್ದ ಬೈಕ್​ನ ನಂಬರ್ ಹೇಳಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸಿದ ಕೂಡಲೇ ಬೈಕ್ ಸವಾರರು ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಮಡಿವಾಳ ಠಾಣಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Related news

error: Content is protected !!