Saturday, June 20, 2026
spot_imgspot_img
spot_imgspot_img

ಕಾರು ಸಮೇತ ವ್ಯಕ್ತಿಯ ಸಜೀವ ದಹನ

- Advertisement -
- Advertisement -

ಹಾಸನ(ಅ.28): ಕಾರು ಸಮೇತ ವ್ಯಕ್ತಿಯೊಬ್ಬನನ್ನು ಸುಟ್ಟು ಕೊಲೆ ಮಾಡಿರೋ ಘಟನೆ ಹಾಸನ ಜಿಲ್ಲೆ ಚೆನ್ನರಾಯಪಟ್ಟಣ ತಾಲ್ಲೂಕಿನ ಮಟ್ಟನವಿಲೆ ಬಳಿ ನಡೆದಿದೆ.

ಹಂತಕರು ವ್ಯಕ್ತಿಯನ್ನು ಕೊಂದು ಕಾರ್ ಡಿಕ್ಕಿಯಲ್ಲಿ ಮೃತದೇಹವಿಟ್ಟಿದ್ದಾರೆ. ಬಳಿಕ ಕಾರು ಸಮೇತ ಮೃತದೇಹಕ್ಕೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ 75ರ ಸಮೀಪವೆ ಭೀಕರ ಕೃತ್ಯ ನಡೆದಿದೆ. ಮೃತ ವ್ಯಕ್ತಿ ಯಾರೆಂದು ಗುರುತು ಸಿಗಲಾರದಷ್ಟು ಶವ ಸುಟ್ಟು ಹೋಗಿದೆ. ಹಿರಿಸಾವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!